April 2, 2025

ಮಂಗಳೂರು: ಭಾರತದ ಏಕೈಕ ಅಂತರರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡಲ್ ಈವೆಂಟ್ ಆಗಿರುವ “ಇಂಡಿಯಾ ಪ್ಯಾಡಲ್ ಫೆಸ್ಟಿವಲ್-2025″ರ ತನ್ನ ಎರಡನೇ ಆವೃತ್ತಿಯೊಂದಿಗೆ ಮಂಗಳೂರಿಗೆ ಮರಳಿದೆ. ಕ್ರಿಶ್ಚಿಯನ್ ಆಂಡರ್ಸನ್, ಮಾಜಿ ವಿಶ್ವ ಚಾಂಪಿಯನ್ ಡೇನಿಯಲ್ ಹಸುಲ್ಯೊ ಮತ್ತು ನಾಲ್ಕು ಬಾರಿ ವಿಶ್ವ ಚಾಂಪಿಯನ್ ಮತ್ತು ಡಿಫೆಂಡಿಂಗ್ ವುಮೆನ್ಸ್ ಚಾಂಪಿಯನ್ ಆಗಿರುವ ಎಸ್ಪೆರಾಂಜ ಬರ್ರೆರಸ್ (Esperanza Barreras) ಭಾಗಿಯಾಗಲಿದ್ದಾರೆ.ಭಾರತವನ್ನು ಮುನ್ನಡೆಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಚಾಂಪಿಯನ್ ಆಗಿರುವ ಸೇಕರ್ ಪಚ್ಚೈ ಅವರು ವಹಿಸಿಕೊಂಡಿದ್ದಾರೆ. ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌ನ ಎರಡನೇ ಆವೃತ್ತಿಯು ಇದೇ ಮಾರ್ಚ್ 7 ರಿಂದ 9 ರವರೆಗೆ ಮಂಗಳೂರಿನ ಸಸಿಹಿತ್ಲು ಬೀಚ್ ನಲ್ಲಿ ನಡೆಯಲಿದೆ.ಮೂರು ದಿನಗಳ ಅಂತರರಾಷ್ಟ್ರೀಯ ಕಾರ್ಯಕ್ರಮವನ್ನು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಮತ್ತು ಮಂತ್ರ ಸರ್ಫ್ ಕ್ಲಬ್ ಸಹಯೋಗದೊಂದಿಗೆ ಆಯೋಜಿಸಿದೆ. ಇನ್‌ಕ್ರೆಡಿಬಲ್ ಇಂಡಿಯಾ ಮತ್ತು ಕರ್ನಾಟಕ ಪ್ರವಾಸೋದ್ಯಮವು ಹೆಮ್ಮೆಯಿಂದ ಪ್ರಸ್ತುತಪಡಿಸಿರುವ ಈ ಇವೆಂಟ್ ಅಸೋಸಿಯೇಷನ್ ಆಫ್ ಪ್ಯಾಡಲ್‌ಸರ್ಫ್ ಪ್ರೊಫೆಷನಲ್ಸ್ ವರ್ಲ್ಡ್ ಟೂರ್, ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್‌ಗಾಗಿ ಅಧಿಕೃತ ವಿಶ್ವ ಚಾಂಪಿಯನ್‌ಶಿಪ್ ಟೂರ್‌ನಿಂದ ಮಂಜೂರು ಮಾಡಲ್ಪಟ್ಟಿದೆ. ಈ ಇವೆಂಟ್ ನಲ್ಲಿ SUP ರೇಸಿಂಗ್, ಲೈವ್ ಸಂಗೀತ ಪ್ರದರ್ಶನಗಳು ಮತ್ತು ರೋಮಾಂಚಕ ಸಾಂಸ್ಕೃತಿಕ ಉತ್ಸವಗಳು ಕೂಡ ಇರಲಿದೆ.
ಮಹಿಳಾ ವಿಭಾಗದಲ್ಲಿ ನಾಲ್ಕು ಬಾರಿ ಅಂತರರಾಷ್ಟ್ರೀಯ ಸರ್ಫಿಂಗ್ ಅಸೋಸಿಯೇಷನ್ SUP ವಿಶ್ವ ಚಾಂಪಿಯನ್ ಆಗಿರುವ ಸ್ಪೇನ್‌ನ ಹಾಲಿ ಚಾಂಪಿಯನ್ ಎಸ್ಪೆರಾನ್ಜಾ ಬ್ಯಾರೆರಸ್‌ ಈ ಇವೆಂಟ್ ಗೆ ಹಿಂತಿರುಗಲಿದ್ದಾರೆ. ದಕ್ಷಿಣ ಆಫ್ರಿಕಾದ ಉದಯೋನ್ಮುಖ ತಾರೆ ಚಿಯಾರಾ ವೋರ್ಸ್ಟರ್ ಮತ್ತು ಕೊರಿಯಾದ SUP ಚಾಂಪಿಯನ್ ಲಿಮ್ ಸುಜಿಯೋಂಗ್ ಕೂಡ ಭಾಗಿಯಾಗಲಿದ್ದಾರೆ.ಪುರುಷರ ವಿಭಾಗದಲ್ಲಿ ಸ್ಪೇನ್‌ನ ಆಂಟೋನಿಯೊ ಮೊರಿಲ್ಲೊ ಮತ್ತು ಡೆನ್ಮಾರ್ಕ್‌ನ ಕ್ರಿಶ್ಚಿಯನ್ ಆಂಡರ್ಸನ್ ಅವರಂತಹ ಜಾಗತಿಕ ಅಥ್ಲೀಟ್‌ಗಳು ಈ ಇವೆಂಟ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ಡೇನಿಯಲ್ ಹಸುಲ್ಯೊ, UKಯ ವಿಲ್ ಕೀಟ್ಲಿ ಕರಾವಳಿಯ ಸಸಿಹಿತ್ಲು ಬೀಚ್‌ನ ನೀರಿನಲ್ಲಿ ತನ್ನ ಛಾಪು ಮೂಡಿಸಲು ತಯಾರಾಗಿದ್ದಾನೆ.25-ಬಾರಿ ರಾಷ್ಟ್ರೀಯ SUP ಚಾಂಪಿಯನ್ ಆಗಿರುವ ಹಾಗು ಸ್ಥಳೀಯರ ಅಚ್ಚುಮೆಚ್ಚಿನ ಮತ್ತು ಭಾರತದ ಸ್ಟ್ಯಾಂಡ್-ಅಪ್ ಪ್ಯಾಡ್ಲರ್, ಸೇಕರ್ ಪಚ್ಚೈ ಅವರು ಭಾರತೀಯ ತಂಡವನ್ನು ಮುನ್ನಡೆಸಲಿದ್ದಾರೆ. ಈವೆಂಟ್‌ನಲ್ಲಿ ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಿಂದ ಕೂಡ ಪ್ರಬಲ ತಂಡಗಳು ಸಹ ಭಾಗಿಯಾಗಲಿದೆ.2025ರ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ ಸ್ಪ್ರಿಂಟ್, ತಾಂತ್ರಿಕ ಮತ್ತು ದೂರದ ರೇಸ್‌ಗಳನ್ನು ಸೇರಿ ಹಲವಾರು ಫಾರ್ಮ್ಯಾಟ್‌ಗಳನ್ನು ಒಳಗೊಂಡಿರುತ್ತದೆ. 40 ಕ್ಕೂ ಹೆಚ್ಚು ಸ್ಟ್ಯಾಂಡ್-ಅಪ್ ಪ್ಯಾಡ್ಲರ್‌ಗಳು ಪುರುಷರ ಓಪನ್, ಮಹಿಳೆಯರ ಓಪನ್, ಜೂನಿಯರ್ U-16 ಹುಡುಗರು ಮತ್ತು ಹುಡುಗಿಯರು ನಾಲ್ಕು ವಿಭಿನ್ನ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.ಕರಾವಳಿಯ ಸಸಿಹಿತ್ಲು ಬೀಚ್ ನಲ್ಲಿ ನಡೆಯಲಿರುವ ಈ “ಇಂಡಿಯಾ ಪ್ಯಾಡಲ್ ಫೆಸ್ಟಿವಲ್-2025” ಕ್ರೀಡಾಪಟುಗಳು ಮತ್ತು ಪ್ರೇಕ್ಷಕರಿಗೆ ಮರೆಯಲಾಗದ ಅನುಭವವನ್ನು ನೀಡುತ್ತದೆ.


Leave a Reply

Your email address will not be published. Required fields are marked *