ಕೋಲಾರ: ಪ್ರಜೆಗಳಾದ ನಾವು ಪ್ರಕೃತಿಯನ್ನು ರಕ್ಷಿಸಿದರೆ ಭವಿಷ್ಯದಲ್ಲಿ ಪ್ರಕೃತಿಯಿಂದ ಉಂಟಾಗುವ ಅನಾಹುತಗಳನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಿಡಗಳನ್ನು ಬೆಳೆಸುವುದರೊಂದಿಗೆ ಪ್ರಕೃತಿಯನ್ನು ರಕ್ಷಿಸಬೇಕಾಗಿರುವುದ ನಮ್ಮೆಲ್ಲರ ಕರ್ತವ್ಯವೆಂದು ವೇಮಗಲ್ ಪೊಲೀಸ್ ಇನ್ಸ್‌ಪೆಕ್ಟರ್ ಲೋಕೇಶ್ ಹೇಳಿದರು.
ಸಂವಿಧಾನ ಸಂಭ್ರಮ ಅಮೃತ ಮಹೋತ್ಸವದ ಅಂಗವಾಗಿ ಜೈ ಭೀಮ್ ಭಾರತ ಸಂಘಟನೆಯ ಆಶ್ರಯದಲ್ಲಿ ಕೋಲಾರ ತಾಲ್ಲೂಕು ವೇಮಗಲ್‌ನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ “ವಿಶ್ವ ಪರಿಸರ ದಿನಾಚಣೆ”ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಿ, ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಸಂವಿಧಾನ ಓದು ಪುಸ್ತಕವನ್ನು ನೀಡಲಾಯಿತು.
ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ವಿ.ಸತ್ಯನಾರಾಯಣ, ಕರ್ನಾಟಕ ಮಹಿಳಾ ಸೇನೆಯ ಸಂಸ್ಥಾಪಕ ಅಧ್ಯಕ್ಷ ಡಿ.ಎಸ್.ಎಸ್.ಮಂಜುಳ, ಜೈ ಭೀಮ್ ಭಾರತ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ನರಸಾಪುರ ಎಸ್.ನಾರಾಯಣಸ್ವಾಮಿ, ರಾಜ್ಯಾಧ್ಯಕ್ಷ ವೇಮಗಲ್ ವಿಜಿಕುಮಾರ್, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಬ್ಯಾಂಕ್ ನಾರಾಯಣಸ್ವಾಮಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷ ಕೆ.ಕೆ.ನಳಿನಿ, ಸಂಘಟನಾ ಕಾರ್ಯದರ್ಶಿ ಪುರಹಳ್ಳಿ ಚಲಪತಿ, ಜಿಲ್ಲಾಧ್ಯಕ್ಷೆ ಮಾಲೂರು ಮಹಾಲಲಕ್ಷ್ಮಿ ಉಪಾಧ್ಯಕ್ಷೆ ಶಶಿಕಲಾ, ಕಾರ್ಯಾಧ್ಯಕ್ಷೆ ಪುಷ್ಪಲತಾ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಫೀವುಲ್ಲಾ, ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.