ಭಟ್ಕಳ: ವಿದ್ಯಾರ್ಥಿಗಳು “STEM” ನ
ಸದುಪಯೋಗ ಪಡೆದುಕೊಳ್ಳಿ ಎಂದು
ಅಂಜುಮನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ ಫಜ್ಲೂರ್ ರೆಹಮಾನ್ ಹೇಳಿದರು.
ಅಂಜುಮನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಸಭಾಭವನದಲ್ಲಿ ಡಿ.21 ರ ಶನಿವಾರ ನಡೆದ “STEM-2024” (SCIENCE, TECHNOLOGY, ENGINEERING.MATHS) ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.STEM ಶಿಕ್ಷಣವು ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ನವೀನವಾಗಿ ಅನ್ವಯಿಸಲು ಪ್ರೋತ್ಸಾಹಿಸುತ್ತದೆ. ಈ ಶಿಕ್ಷಣವು ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಸವಾಲಿನ ಪ್ರಾಯೋಗಿಕ ಅಧ್ಯಯನಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ, ಆತ್ಮವಿಶ್ವಾಸ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಹೇಳಿದರು.ಮುಖ್ಯಅತಿಥಿಯಾಗಿ ನೌಮನ್ ಪಟೇಲ್ ಶಾಬಂದರಿ ಭಾಗವಹಿಸಿದ್ದರು. ರಿಜಿಸ್ಟ್ರಾರ್ ಪ್ರೊ.ಜಾಹಿದ್ ಖರೂರಿ, ಮ್ಯೆಕಾನಿಕಲ್ ವಿಭಾಗದ ಮುಖ್ಯಸ್ಥ ಡಾ.ಅನಂತಮೂರ್ತಿ ಶಾಸ್ತ್ರಿ ಪ್ರೊ.ಕ್ವಾರತಲಿನ್ ಪ್ರೊ.ಶ್ರೀಶೈಲ ಭಟ್ ಮುಂತಾದವರು ಉಪಸ್ಥಿತರಿದ್ದರು.
ಕುರಾನ್ ಪಠನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರಾಜ್ಯದ ವಿವಿಧ ಕಡೆಗಳಿಂದ ಸುಮಾರು 450 ಪಿ.ಯು ವಿದ್ಯಾರ್ಥಿಗಳು ಆಗಮಿಸಿದ್ದರು. STEM ಕಾರ್ಯಕ್ರಮವು ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲ್ಪಟ್ಟಿತ್ತು.
ಬಗ್ಡ್ ಔಟ್, ಎಲೆಕ್ಟ್ರಿವಿಯಾ, ಇವಾಲ್ವಾನ್ಸ್, ಸ್ಪಾರ್ಕೋರ್, ಮಾಡೆಲ್ ಎಕ್ಸ್‌ಪೋ ಎಂಬ ಕಾರ್ಯಕ್ರಮಗಳು ನಡೆದವು.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸುಮಾರು 80000 ರೂಪಾಯಿ ಬೆಲೆಯ ಬಹುಮಾನ ವಿತರಿಸಲಾಯಿತು.
-ಲೋಕೇಶ್ ನಾಯ್ಕ್, ಭಟ್ಕಳ.