ಚಡಚಣ: ತಾಲೂಕಿನ ಶಿರಾಡೋಣ ಗ್ರಾಮದಲ್ಲಿ 12 ವರ್ಷಗಳಿಂದ ವಾಸವಿದ್ದ ಕೋತಿಯು ನಿಧನವಾದ ಹಿನ್ನೆಲೆ ಗ್ರಾಮಸ್ಥರಿಂದ ಅಂತಿಮ ವಿದಾಯ ಮಾಡಲಾಯಿತು. ಕೋತಿಯ ಸಾವಿಗೆ ಗ್ರಾಮಸ್ಥರು ಮರುಗಿದರು. ಕೋತಿಯು ಹನುಮಾನ್ ದೇವರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಕೋತಿಗೆ ಪೂಜಾ ನೆರವೇರಿಸಿ, ಆರತಿ ಬೆಳಗಿ, ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುವ ಅಂತ್ಯಕ್ರಿಯೆ ಮಾಡಿದರು.ಗ್ರಾಮದ ಹನುಮಾನ ದೇವಸ್ಥಾನದಿಂದ ಊರ ಗ್ರಾಮಸ್ಥರೆಲ್ಲರೂ ಮೆರವಣಿಗೆಯ ಮೂಲಕ ವಿವಿಧ ವಾದ್ಯಗಳ ವೈಭಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಹನುಮಾನ ದೇವಸ್ಥಾನದ ಆವರಣದಲ್ಲಿ ವಿಧಿ/ ವಿಧಾನಗಳ ಮೂಲಕ ಗ್ರಾಮಸ್ಥರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ರಾಜು ವಿ.ಬಗಲಿ, ಸಂಜು.ಅ ಪೂಜಾರಿ, ಸಿದ್ದು ಹತ್ತರಕಿ, ಮಾಳಪ್ಪ ಬಗಲಿ, ಪ್ರಕಾಶ ಬಗಲಿ, ಸಿದ್ದರಾಮ ವಿಠ್ಠಲ ಬಗಲಿ, ಸುನಿಲ ಬಗಲಿ, ಶಂಕ್ರು ಬಗಲಿ, ಸಿದ್ದು ತೆಲಗಾವ ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
-ಶ್ರೀಕಾಂತ ಬಗಲಿ