December 24, 2024

ಉಡುಪಿ: ಪರಿಸರ ಸ್ನೇಹಿ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಉಡುಪಿ ವಲಯ ಅರಣ್ಯಾಧಿಕಾರಿ ವಾರಿಜಾಕ್ಷಿ ಹೇಳಿದರು.
ವಿಕಲಚೇತನರ ಪರವಾಗಿ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ.ಸೋನಿಯಾ ನೇತೃತ್ವದ ಪೀಸ್ ಫೌಂಡೇಶನ್ ನ್ಯಾಷನಲ್ ಎನ್‌ಜಿ ಓ ಹಾಗೂ ಉಡುಪಿ ಜಿಲ್ಲಾ ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಸಾವಿರ ಗಿಡಗಳನ್ನು ನೆಡುವ ಪರಸರ ಸ್ನೇಹಿ ಕಾರ್ಯಕ್ರಮಕ್ಕೆ ನಗರದ ಅದಿಉಡುಪಿ ಬಳಿಯಿರುವ ವಲಯ ಅರಣ್ಯ ಕಚೇರಿಯಲ್ಲಿ
ಚಾಲನೆ ನೀಡಿ ಅವರು ಮಾತನಾಡಿದರು.
ಪೀಸ್ ಪೌಂಡೇಶನ್ ಜಿಲ್ಲೆಯ ವಿವಿಧ ಶಾಲೆ ಹಾಗೂ ಸಂಘ ಸಂಸ್ಥೆಗಳಲ್ಲಿ ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡುವ
ಇಂತಹ ಕಾರ್ಯಕ್ರಮಗಳು ಎಲ್ಲರಿಗೂ ಸ್ಪೂರ್ತಿ ತರಲಿ ಎಂದು ಹಾರೈಸಿದರು.

ಹಿರಿಯ ವಕೀಲರಾದ
ಜಯಪ್ರಕಾಶ್ ಕೆದ್ಲಾಯ ರವರು ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಹಸಿರೇ ನಮ್ಮ ಉಸಿರು, ಇವತ್ತು ಹಸಿರು ಕ್ರಾಂತಿ ಇಡೀ ದೇಶದಲ್ಲೇ ಅಗಬೇಕಾಗಿದೆ. ಅದಷ್ಟು ಶಾಲಾ ಕಾಲೇಜಿನ ಖಾಲಿ‌ ಜಾಗದಲ್ಲಿ ಗಿಡಗಳನ್ನು‌‌ ನೆಟ್ಟು‌ ಬೆಳಸಿದ್ದಲ್ಲಿ ನಮ್ಮ ಜೀವನ‌ ಸಾರ್ಥಕ ಎನಿಸುತ್ತದೆ. ಇವತ್ತು ವಿಕಲಚೇತನರೆಲ್ಲರೂ ಒಗ್ಗೂಡಿ ಸಾವಿರ ಗಿಡಗಳನ್ನು‌ ನೆಡುವ ಮೂಲಕ ಹಸಿರು ಕ್ರಾಂತಿಗೆ ಮುಂದಾಗಿರುವುದು ಸಂತಸದ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಯೋಜನಾ‌ ಸಹಾಯಕ ಶಿವಾಜಿ, ಪೀಸ್ ಫೌಂಡೇಶನ್ ಸಂಸ್ಥೆಯ ಜಗದೀಶ್ ಭಟ್, ಉದ್ಯಮಿಗಳಾದ ಸ್ಟಾನ್ಲಿ, ಪತ್ರಕರ್ತರಾದ ಜನಾರ್ದನ್ ಕೊಡವೂರು, ಶಿಜಿತ್, ಕಲಾವಿದ ಸಂದೇಶ್, ಯುವ ಉದ್ಯಮಿ ಕೆ.ಸಂದೀಪ್, ಅರಣ್ಯ ಇಲಾಖಾ ಸಿಬ್ಬಂದಿ ಕೇಶವ ಪೂಜಾರಿ ಉಪಸ್ಥಿತರಿದ್ದರು.
ಬಳಿಕ‌ ಅದಿ‌ ಉಡುಪಿ ಶಾಲಾ ವಾಠಾರದಲ್ಲಿ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.


Leave a Reply

Your email address will not be published. Required fields are marked *