ರಾಯಚೂರು: ನಾಲ್ಕು ತಿಂಗಳ ಚಾತುರ್ಮಾಸ್ಯ ವ್ರತ ಮಾಡಲಿರುವ ಜೈನ ಸಮಾಜದ ಗುರು ಶ್ರೀನರೇಶ ಮುನಿ ಗುರುಮಹಾರಾಜ್ ಮತ್ತು ಪರಮ ಪೂಜ್ಯ ಶಾಸ್ಲೀಭದ್ರ ಗುರುಮಹಾರಾಜರ ಮೆರವಣಿಗೆ ನಗರದಲ್ಲಿ ಇಂದು 14-07-2024ರ ಬೆಳಿಗ್ಗೆ ಅದ್ದೂರಿಯಾಗಿ ಜರುಗಿತು. ನಾಲ್ಕು ತಿಂಗಳ ಚಾತುರ್ಮಾಸ್ಯ ವ್ರತ ಮಾಡಲಿರುವ ಜೈನ ಸಮಾಜದ ಗುರುಮಹಾರಾಜ್ ಶ್ರೀನರೇಶ ಮುನಿಜಿ, ಶಾಸ್ಲೀಭದ್ರ ಗುರು ಮಹಾರಾಜ, ಶಾಲಿಭದ್ರ ಜಿ, ಮಹಾಸಾಧವಿ ಮಲ್ಲಿಶ್ರೀ ಜಿ, ಆಸ್ತಶ್ರೀಣಿ, ಶಾರದ ಶ್ರೀಜಿ, ಪರಮ ಪ್ರಜ್ಞಾ ಪೂಜ್ಯರವರು ಐತಿಹಾಸಿಕ ಚಾತುರ್ಮಾಸ್ಯ ವ್ರತ ಆಚರಿಸಲಿದ್ದಾರೆ.ನಗರದ ಪಾರಸ್ ಗಾರ್ಡನ್ ನಿಂದ ಪ್ರಾರಂಭವಾದ ಮೆರವಣಿಗೆ ಲೋಹರವಾಡಿ, ಮಹಾವೀರ್ ವೃತ್ತ ಮಾರ್ಗವಾಗಿ ಜೈನ ಸ್ಥಾನಿಕ ಭವನಕ್ಕೆ ಬಂದು ತಲುಪಿತು. ಮಹಾರಾಜರು ಭಕ್ತಾದಿಗಳಿಗೆ ಆಶೀರ್ವದಿಸಿದರು. ನಂತರ ಮೆರವಣಿಗೆಯು ಜೈನ ಮಂದಿರದಿಂದ ತೀನ್ ಕಂದಿಲ್, ಕಾಟೆ ಬಜಾರ್, ಹರಿಹರ ರೋಡ್, ಲಿಂಗಸೂಗೂರು ರಸ್ತೆ, ಕದಂಬ ಮೈದಾನಕ್ಕೆ ಅತೀ ವಿಜೃಂಭಣೆಯಿಂದ ಕರೆತರಲಾಯಿತು.
ಮೆರವಣಿಗೆಯಲ್ಲಿ ಜೈನ್ ಸಮಾಜದ ಅಧ್ಯಕ್ಷ ಶಾಂತಿಲಾಲ್ ಮೂಥಾ, ನರೇಂದ್ರರಾಜ ಮೂಥಾ, ಉಪಾಧ್ಯಾಕ್ಷ ಕಿಶೋರ ಕುಮಾರ, ಉಪಾಧ್ಯಕ್ಷರು ಪ್ರಸನ್ನ ರಾಜ್ ಬೋಹರಾ, ಜಂಟಿ ಕಾರ್ಯದರ್ಶಿ ಗೌತಮ್ ಪ್ರಕಾಶ ಘಿಯಾ, ಸಜ್ಜನ್ ಬೋಹರಾ, ಸದಸ್ಯರಾದ ಎಸ್.ಕಮಲ್ ಕುಮಾರ್ ಜೈನ್, ಸರ್ವಸಮಾಜದ ಭಕ್ತವೃಂದ, ಜನಪ್ರತಿನಿದಿಗಳು ವಿವಿಧ ಸಂಘ ಸಂಸ್ಥೆಗಳ ಮುಖಂಡರು ಸೇರಿದಂತೆ ಸಮಾಜದ ಮಹಿಳೆಯರು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಅಹಿಂಸಾ (ಅಹಿಂಸೆ): ಜೈನ ಧರ್ಮದ ಸಂಸ್ಥಾಪಕರು ಉಲ್ಲೇಖಿಸಿದ ಜೈನ ಧರ್ಮದ ಮೂಲ ತತ್ವ ಅಹಿಂಸಾ. ಜೈನ ಧರ್ಮದ ಬೋಧನೆಗಳ ಪ್ರಕಾರ, ಮಾನವರು, ಕೀಟಗಳು, ಪ್ರಾಣಿಗಳು, ಸಸ್ಯಗಳು, ಬಂಡೆಗಳು ಸೇರಿದಂತೆ ಎಲ್ಲಾ ಜೀವಿಗಳು ಸಮಾನ ಜೀವನವನ್ನು ಹೊಂದಿವೆ. ಜೈನ ಧರ್ಮವು ಭೂಮಿಯ ಮೇಲಿನ ಎಲ್ಲಾ ಜೀವಿಗಳಿಗೆ ದ್ವೇಷವಿಲ್ಲದ, ಹಾನಿಯಾಗದ ಮತ್ತು ನೋಯಿಸದ ಅಹಿಂಸಾ ಪರಮೋಧರ್ಮ ತತ್ವವನ್ನು ಬಲಪಡಿಸುತ್ತದೆ.