ಉಡುಪಿ: ಎಚ್.ಕೆ.ಸುಗಂಧಿನಿ ಅವರು ಡಾ.ಗೋಪಿನಾಥ ನಾಯಕ್ ಮತ್ತು ಡಾ.ಕಿರಣ್ ಕುಮಾರ್ ಶೆಟ್ಟಿ ಎಂ. ಅವರ ಮೇಲ್ವಿಚಾರಣೆಯಲ್ಲಿ ನಿರ್ವಹಿಸಿದ “ಡ್ಯುರಾಬಿಲಿಟಿ ಪ್ರಾಪರ್ಟೀಸ್ ಆಫ್ ನೋ ಅಗ್ರಿಗೇಟ್ ಕಾಂಕ್ರೀಟ್ ಸಬ್ಜೆಕ್ಟೆಡ್ ಟು ಅಗ್ರೆಸ್ಸಿವ್ ಎನ್ವಿರಾನ್ಮೆಂಟ್ಸ್” ಎಂಬ ಪ್ರಬಂಧಕ್ಕಾಗಿ ಮಾಹೆ ಮಣಿಪಾಲದಿಂದ ಪಿಎಚ್‌ಡಿ ಪದವಿಯನ್ನು ನೀಡಿದೆ.
ಈ ಸಂಶೋಧನೆಯು ಕಾಂಕ್ರೀಟ್‌ನಲ್ಲಿ ಸಿಮೆಂಟ್, ಜಲ್ಲಿ ಮತ್ತು ಮರಳಿಗೆ ಪೂರಕವಾಗಿ ಹಾರುಬೂದಿಯ ಸಂಭಾವ್ಯತೆಯ ಮೇಲೆ ಬೆಳಕು ಚೆಲ್ಲುತ್ತದೆ. ಹಾಗೆಯೇ ಕ್ಲೋರೈಡ್ ಮತ್ತು ಸಲ್ಫೇಟ್ ದ್ರಾವಣಗಳ ಕಡೆಗೆ ಅದರ ನಡವಳಿಕೆಯನ್ನು ನಿರ್ಣಯಿಸುತ್ತದೆ.
ಶ್ರೀಮತಿ ಸುಗಂಧಿನಿ ಅವರು ಎಂಐಟಿ ಮಣಿಪಾಲದ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ (ಹಿರಿಯ ಶ್ರೇಣಿ) ಕಾರ್ಯನಿರ್ವಹಿಸುತ್ತಿದ್ದಾರೆ.