December 23, 2024

ಬೆಂಗಳೂರು: ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಸಿಂಗಪುರದಲ್ಲಿ ಆಯೋಜಿಸಿರುವ ಎರಡನೇ ವಿಶ್ವ ಕನ್ನಡ ಹಬ್ಬ ಕಾರ್ಯಕ್ರಮದ ನಿರೂಪಕರಾಗಿ ರಶೀದ್ ನೇಮಕವಾಗಿದ್ದಾರೆ. ವಿಶ್ವ ಕನ್ನಡ ಹಬ್ಬದ ಸರ್ವಾಧ್ಯಕ್ಷ ಡಾ.ಸಿ.ಸೋಮಶೇಖರ್ ರವರು ಆಯ್ಕೆ ಪತ್ರ ನೀಡಿ ಅಭಿನಂದನೆ ತಿಳಿಸಿದರು. ರಶೀದ್ ರವರು ಅತ್ಯುತ್ತಮ ನಿರೂಪಕರಾಗಿ ಸಾವಿರಾರು ಉನ್ನತ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಇವರ ನಿರೂಪಣೆಗೆ ಬಹಳಷ್ಟು ಬೇಡಿಕೆ ಕೂಡ ಇದೆ. ಜೊತೆಗೆ ಕನ್ನಡ ಭಾಷೆಯನ್ನು ಸ್ವಚ್ಛವಾಗಿ ಮಾತನಾಡುವ ಕೌಶಲ್ಯ ಹೊಂದಿದ್ದಾರೆ. ಇಂತಹ ಪ್ರತಿಭೆಯನ್ನು ಈ ದಿನ ವಿಶ್ವ ಕನ್ನಡ ಹಬ್ಬಕ್ಕೆ ನಿರೂಪಕರಾಗಿ ನೇಮಕ ಮಾಡಲಾಗಿದ್ದು, ಅವರಿಗೆ ಸಂಸ್ಥೆ ಶುಭಾಶಯಗಳನ್ನು ತಿಳಿಸಲಿಚ್ಚಿಸುತ್ತಿದೆ ಎಂದು ಅಧ್ಯಕ್ಷ ಶಿವಕುಮಾರ್ ನಾಗರ ನವಿಲೆ ಹೇಳಿದರು.
ಈ ಸಂದರ್ಭದಲ್ಲಿ ದಿನೇಶ್ ಜೋಶಿ, ಶ್ರೀ ಹರ್ಷ ಅಶೋಕ್ ನೀಲಾಪಂತ, ಗಾಯಕ ಮೋಹನ್ ಕೃಷ್ಣ, ನಟಿ ರೂಪಿಕಾ, ರಂಜಿತಾ, ಸುಕೃತಿ ಮುಂತಾದವರು ಉಪಸ್ಥಿತರಿದ್ದರು.