December 23, 2024

ಬೆಂಗಳೂರು: ಕನ್ನಡ ಚಲನಚಿತ್ರಗಳಿಗೆ ನೀಡುತ್ತಿದ್ದ ಸಬ್ಸಿಡಿ ಮತ್ತು ವಾರ್ಷಿಕ ಚಲನಚಿತ್ರ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರಿಗೆ ಬಿಜೆಪಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಟದ ಸಂಚಾಲಕರು, ಚಿತ್ರ ನಿರ್ಮಾಪಕರು ಹಾಗೂ ನಿರ್ದೇಶಕರಾದ ರೂಪ ಅಯ್ಯರ್ ಮನವಿ ಪತ್ರ ಸಲ್ಲಿಸಿದರು.

ಕನ್ನಡ ಚಲನಚಿತ್ರ ಸಬ್ಸಿಡಿ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮಗಳು ರಾಜ್ಯದಲ್ಲಿ ನಡೆಯುತ್ತಿಲ್ಲ. ಇದರಿಂದ ಚಲನಚಿತ್ರ ರಂಗವನ್ನು ನಂಬಿಕೊಂಡಿರುವ ನಿರ್ಮಾಪಕ, ನಿರ್ದೇಶಕ ಮತ್ತು ಕಲಾವಿದರು ತಂತ್ರಜ್ಞಾನರಿಗೆ ಪ್ರೋತ್ಸಾಹ, ಸಹಕಾರ ಸಿಗುತ್ತಿಲ್ಲ.

ಕನ್ನಡ ಭಾಷೆ ಮತ್ತು ಕಲೆ ಮತ್ತು ಸಂಪ್ರದಾಯ, ಸಾಂಸ್ಕೃತಿಕ ಇತಿಹಾಸವು ಕನ್ನಡ ಚಲನಚಿತ್ರಗಳ ಮೂಲಕ ಜನರಿಗೆ ತಲುಪುತ್ತಿವೆ. ಕನ್ನಡ ಚಲನಚಿತ್ರಗಳಿಗೆ ಸಹಕಾರ ಪ್ರೋತ್ಸಹ ಸಿಗಲ್ಲಿಲವೆಂದರೆ ಕನ್ನಡ ಚಲನಚಿತ್ರಗಳು ಅವನತಿಯ ಹಾದಿ ಹಿಡಿಯುತ್ತದೆ. ಕಲೆ, ಕಲಾವಿದನಿಗೆ ರಂಗದಲ್ಲಿರುವ ಎಲ್ಲರಿಗೂ ಪ್ರೋತ್ಸಾಹ ಸಿಗುವಂತೆ ಆಗಲಿ ಎಂಬುದು ನಮ್ಮ ಬಯಕೆ. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಹ ಸಂಚಾಲಕರಾದ ಆತ್ಮಾನಂದ, ನಿರ್ದೇಶಕ ಜೊಸೈಮನ್, ಚಿತ್ರ ಸಾಹಿತಿ ನಾಗೇಂದ್ರಪ್ರಸಾದ್ ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *