ದೇವನಹಳ್ಳಿ: ಬೂದಿಗೆರೆ 66/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯಾನಗರ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಾಗುವ ಎಫ್-1 ಮಾರೇನಹಳ್ಳಿ, ಎಫ್-2, ಎಂ. ಹೊಸಹಳ್ಳಿ, ಮತ್ತು ಎಫ್-11 ಹಾರ್ಡ್‍ವೇರ್ ಪಾರ್ಕ್ ಮಾರ್ಗಗಳನ್ನು ತುರ್ತು ಕಾರ್ಯದ ನಿಮಿತ್ತ ಮಾರ್ಗ ಮುಕ್ತಗೊಳಿಸುವುದರಿಂದ ದಿನಾಂಕ 12-06-2024 ರ ಬುಧವಾರ ಬೆಳಿಗ್ಗೆ 10-00 ರಿಂದ ಸಂಜೆ 5-00 ಘಂಟೆಯವರೆಗೂ ವಿದ್ಯುತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದೆ ಎಂದು ಬೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಸದರಿ ಮಾರ್ಗಗಳ ವ್ಯಾಪ್ತಿಯ ಮಾರೇನಹಳ್ಳಿ, ಮಾರಸಂದ್ರ, ಚೊಕ್ಕನಹಳ್ಳಿ, ದಾಸನಾಯಕನಹಳ್ಳಿ, ಗೋಪಾಲಪುರ, ಮರಳಕುಂಟೆ, ಎಂ.ಹೊಸಹಳ್ಳಿ ಮಂಚಪನಹಳ್ಳಿ, ಕಾಡು ಸೊಣ್ಣಪ್ಪನಹಳ್ಳಿ, ಹೊಸೂರು ಬಂಡೆ, ಬಂಡೆ ಹೊಸೂರು ಮತ್ತು ಮಿಟ್ಟಗಾನಹಳ್ಳಿ, ಗ್ರಾಮಗಳ ವ್ಯಾಪ್ತಿಗೆ ಬರುವ ಗ್ರಾಹಕರಿಗೆ ವಿದ್ಯುತ್‍ನಲ್ಲಿ ಅಡಚಣೆಯಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಎಂದು ವಿದ್ಯಾನಗರ.ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.