ಉಡುಪಿ: ಕರಂದಾಡಿ ದಿ.ಲೀಲಾಧರ್ ಶೆಟ್ಟಿಯವರು ಸ್ಥಾಪಿಸಿ, ಪೋಷಿಸಿದ ಸಂಸ್ಥೆಯಿಂದ ಅವರ ಸವಿ ನೆನೆಪಿಗಾಗಿ ಶ್ರೀಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕೃಪಾಪೋಶಿತ ತ್ರಿಮೂರ್ತಿ ಯಕ್ಷಗಾನ ಕಲಾ ಕೇಂದ್ರ ಕರಂದಾಡಿ ಇದರ ಆಶ್ರಯದಲ್ಲಿ ಕರಂದಾಡಿ ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಯಕ್ಷಗಾನ ತರಬೇತಿ ತರಗತಿಯನ್ನು ಪ್ರಾರಂಭಿಸಲಾಯಿತು.
ಯಕ್ಷಗಾನದ ತರಗತಿಯನ್ನು ಶಾಲಾ ನಿವೃತ್ತ ಮುಖ್ಯೋಪಾಧ್ಯಯರಾದ ನಿರ್ಮಲ್ ಕುಮಾರ್ ಹೆಗ್ಡೆಯವರು ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಆರ್.ಎಸ್.ಕಲ್ಲೂರರು ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾ ಕೇಂದ್ರದ ಗುರುಗಳಾದ ನಿತ್ಯಾನಂದ ಶೆಟ್ಟಿಗಾರ್ ಕುಕ್ಕಿಕಟ್ಟೆ ರವರು ಶಾಲಾ ಮಕ್ಕಳಿಗೆ ಯಕ್ಷಗಾನದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಲಾ ದೈಹಿಕ ಶಿಕ್ಷಕರಾದ ಪ್ರಕಾಶ್, ಶಿಕ್ಷಕಿಯರಾದ ಹರಿಣಾಕ್ಷಿ , ಶ್ವೇತಾ, ಲವೀನಾ, ಅನಿತಾ ಮತ್ತು ಭಜನಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಉಪಸ್ಥಿತಿತರಿದ್ದರು. ಭಜನಾ ಮಂಡಳಿಯ ಅಧ್ಯಕ್ಷರಾದ ಶ್ರೀಧರ್ ಶೆಟ್ಟಿಗಾರ್ ಸ್ವಾಗತಿಸಿ ಶಾಲಾ ಶಿಕ್ಷಕಿ ಸತ್ಯವತಿ ಧನ್ಯವಾದವಿತ್ತರು.