ಉಡುಪಿ: ಮಣಿಪಾಲದ ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಆಶ್ರಯದಲ್ಲಿ “ಸ್ವ-ಕೃತಿ” ವಿದ್ಯಾರ್ಥಿಗಳ ಸೃಜನಶೀಲ ಚಟುವಟಿಕೆಗಳ ಒಂದು ದಿನದ ಪ್ರದರ್ಶನ 13-06-2024 ರಂದು ನಡೆಯಲಿದೆ. ಬೆಳಿಗ್ಗೆ 10.15 ಕ್ಕೆ ಕಲಾವಿದೆ-ಉದ್ಯಮಿ ಶ್ರೀಮತಿ ವನಿತಾ ಪೈ ಪ್ರದರ್ಶನವನ್ನು ಉದ್ಘಾಟಿಸುವರು. ಈ ಪ್ರದರ್ಶನವು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳ ಭಾಗವಾಗಿದೆ. ಇದು ಪೇಂಟಿಂಗ್, ಫೋಟೋಗ್ರಫಿ, ಕವನ, ಕೊಲಾಜ್ ಮತ್ತು ಚಲನಚಿತ್ರ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ. ಪ್ರದರ್ಶನವು ಸಾರ್ವಜನಿಕರಿಗೆ ಮುಕ್ತವಾಗಿದ್ದು ಸಂಜೆ 7 ಗಂಟೆಯ ವರೆಗೆ ತೆರೆದಿರುತ್ತದೆ.