ಬೆಂಗಳೂರು: ಸಿಂಗಾಪುರದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಆಯೋಜಿಸಿರುವ ವಿಶ್ವ ಕನ್ನಡ ಹಬ್ಬದ ಪೂರ್ವಬಾವಿ ಸಿದ್ಧತೆ ಹಾಗೂ ಪತ್ರಿಕಾ ಗೋಷ್ಠಿ ನಡೆಸಲು ಅಧ್ಯಕ್ಷರಾದ ಶಿವಕುಮಾರ್ ನಾಗರ ನವಿಲೆ, ಸುನೀಲ್ ಮತ್ತು ರಜತ್ ತಂಡ ಸಿಂಗಾಪುರಕ್ಕೆ ತೆರಳಿದರು. ಹೊರಡುವ ಮುನ್ನ ಮಹರ್ಷಿ ಡಾ.ಆನಂದ್ ಗುರೂಜಿಯವರ ಆಶೀರ್ವಾದ ಪಡೆಯಲಾಯಿತು. ಗುರೂಜಿಯವರು ಕಾರ್ಯ ಸಿದ್ಧಿಯಾಗಲಿ, ಸಿಂಗಾಪುರದಲ್ಲಿ ಕನ್ನಡಮ್ಮನ ಕೀರ್ತಿ ಪತಾಕೆ ರಾರಾಜಿಸಲಿ, ತಾಯಿ ಭುವನೇಶ್ವರಿಯ ಕೃಪಾ ಕಟಾಕ್ಷ ಸದಾ ನಿಮ್ಮೊಂದಿಗಿರಲಿ ಎಂದು ಕನ್ನಡ ಭಾವುಟವನ್ನು ಆಶೀರ್ವಾದದ ಮೂಲಕ ಅಧ್ಯಕ್ಷರಿಗೆ ನೀಡಿದರು.
ಅನಂತರ ವನಕಲ್ಲು ಮಠದ ಪೀಠಾಧ್ಯಕರಾದ ಶ್ರೀಶ್ರೀಶ್ರೀ ಬಸವ ರಮಾನಂದ ಮಹಾಸ್ವಾಮಿಗಳು ಸಿಂಗಾಪುರಕ್ಕೆ ಹೊರಟಿರುವ ತಂಡಕ್ಕೆ ಶುಭ ಕೋರಿ, ಕನ್ನಡ ಹಬ್ಬದ ಸಕಲ ಸಿದ್ಧತೆಗಳು ಯಶಸ್ವಿಯಾಗಲಿ ಎಂದು ಆಶೀರ್ವಾದ ಮಾಡಿದರು.