December 24, 2024

ಸಂಜೆ ಪ್ರಭ ಪುಷ್ಕರ (ರಾಜಸ್ಥಾನ): ಆಲ್ ಇಂಡಿಯಾ ಬ್ರಾಹ್ಮೀನ್ಸ್ ಫೆಡರೇಷನ್ ನ ಕಾರ್ಯಕಾರಿಣಿ ಸಭೆಯು ರಾಜಸ್ಥಾನದ ಪುಷ್ಕರದ ದಧಿಚಿ ಭವನದಲ್ಲಿ ನಡೆಯಿತು. ಈ ಸಭೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದು ಸನಾತನ ಧರ್ಮದ ಸಂರಕ್ಷಣೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಕಾರ್ಯತತ್ಪರರಾಗಬೇಕು ಎಂದು ರಾಷ್ಟ್ರೀಯ ಅಧ್ಯಕ್ಷ ಡಾ.ಪ್ರದೀಪ್ ಜ್ಯೋತಿ ಅವರು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಕರ್ನಾಟಕದವರೇ ಆದ ಶ್ರೀಮತಿ ಮಾಲಿನಿ.ಎನ್, ಅವರನ್ನು ರಾಷ್ಟ್ರೀಯ ಮಹಿಳಾ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದಾಗಿ ಅವರು ಘೋಷಿಸಿದರು.


Leave a Reply

Your email address will not be published. Required fields are marked *