ಚನ್ನರಾಯಪಟ್ಟಣ: ಶ್ರೀಚಂದ್ರಶೇಖರ್ ಗುರೂಜಿಯವರ ಹುಟ್ಟು ಹಬ್ಬದ ಪ್ರಯುಕ್ತ ನಗರದ ಮಾತೃಭೂಮಿ ವೃದ್ರಾಶ್ರಮದಲ್ಲಿ ನಿರಾಶ್ರಿತರಿಗೆ ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು.
ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಮಾತೃಭೂಮಿ ವೃದ್ಧಾಶ್ರಮದಲ್ಲಿ ವಯೋವೃದ್ಧರ ಸಮ್ಮುಖದಲ್ಲಿ ಶ್ರೀಚಂದ್ರಶೇಖರ್ ಗುರೂಜಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಆರತಿ ಬೆಳಗುವ ಮೂಲಕ ತಿಲಕವನ್ನಿಟ್ಟ ವಯೋವೃದ್ಧರು ಶುಭ ಹಾರೈಸಿ ಹರಸಿದರು.
ಈ ಸಂದರ್ಭದಲ್ಲಿ ಅಮೋಘ್, ರವೀಂದ್ರ, ಪ್ರಭಾಕರ್, ವಿಕ್ರಂ ಸೇರಿದಂತೆ ಇತರರು ಹಾಜರಿದ್ದರು.