ತಿಪಟೂರು: ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ತಾಲೂಕು ಘಟಕದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ನಗರದ ಹಾಸನ ರಸ್ತೆಯ ಡಾ.ಶಿವಕುಮಾರ ಸ್ವಾಮಿ ಸರ್ಕಲ್ ನ ಬಳಿ ಇರುವ ನಂದಿನಿ ಹಾಲಿನ ಮಳಿಗೆಯ ಆವರಣದಲ್ಲಿ ಏರ್ಪಡಿಸಲಾಗಿತ್ತು. ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಿದ್ದಾರ್ಥ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಪಿ.ಎಸ್. ಮಲ್ಲಿಕಾರ್ಜುನಯ್ಯ, ಸಮಾಜ ಸೇವಕರಾದ ಮಾದಿಹಳ್ಳಿ ದಯಾನಂದ, ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ.ಎಲ್.ಎಂ.ವೆಂಕಟೇಶ್, ಕರ್ನಾಟಕ ಸಂಪಾದಕರು ಮತ್ತು ವರದಿಗಾರರ ಸಂಘದ ತಾಲೂಕು ಗೌರವಾಧ್ಯಕ್ಷ ಭಾಸ್ಕರ್, ಅಧ್ಯಕ್ಷ ಎಸ್.ಗಣೇಶ್, ಸಾಹಿತಿ ಶಂಕ್ರಪ್ಪ ಬಳ್ಳೆಕಟ್ಟೆ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಸರ್ವೇಶ ಆಚಾರ್, ಸಂಘದ ನಿರ್ದೇಶಕರಾದ ಕುಪ್ಪಾಳು ಧರಣೇಶ್, ಮಂಜು ಗುರಗದಹಳ್ಳಿ, ಶುಭ ವಿಶ್ವಕರ್ಮ, ತ್ರಿವೇಣಿ ಸುಂದರ್, ಹಾರೋಗಟ್ಟ ಗಂಗಾಧರ್ ಮತ್ತಿತರರು ಇದ್ದರು.