ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮತ್ತು ಪ್ರಾದೇಶಿಕ ಭವಿಷ್ಯ ನಿಧಿ ಕಛೇರಿಯ ಸಹಯೋಗದೊಂದಿಗೆ 58 ವರ್ಷ ಪೂರ್ಣಗೊಂಡ 100ಕ್ಕಿಂತ ಹೆಚ್ಚು ನೌಕರರಿಗೆ “ಪ್ರಯಾಸ್” ಯೋಜನೆ ಅಡಿಯಲ್ಲಿ ಪಿಂಚಣಿ ಸೌಲಭ್ಯದ ಆದೇಶ ಪತ್ರಗಳನ್ನು ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿಯವರು ದಿ.01-07-2024 ರ ಸೋಮವಾರ ಬೆಂ.ಮ.ಸಾ.ಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ವಿತರಿಸಿದರು.
ಪ್ರಯಾಸ್ ಯೋಜನೆಯಿಂದಾಗಿ ನೌಕರರು ಕೆಲಸ ಮಾಡುವ ಸಂಸ್ಥೆ ಹಾಗೂ ಪ್ರಾದೇಶಿಕ ಭವಿಷ್ಯನಿಧಿ ಕಛೇರಿಯವರಿಂದ ನೌಕರರು 58 ವರ್ಷ ತುಂಬಿದ ಮಾಹೆಯಲ್ಲಿಯೇ ದಾಖಲೆಗಳನ್ನು ಕ್ರೂಢೀಕರಿಸಿ ಮುಂಚಿತವಾಗಿ ಸಲ್ಲಿಸುವುದರಿಂದ, ಪಿಂಚಣಿ ಪಾವತಿ ಆದೇಶದ ವಿಲೇವಾರಿ ನೌಕರರ 58ನೇ ವರ್ಷದ ಕೊನೆಯ ದಿನ ವಿತರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಬೆ.ಮ.ಸಾ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್.ಅರ್, (ಭಾ.ಆ.ಸೇ),
ನಿರ್ದೇಶಕರಾದ ಶ್ರೀಮತಿ ಶಿಲ್ಪ ಎಂ, (ಭಾ.ಆ.ಸೇ,) ಕ.ರಾ.ರ.ಸಾ.ಸಂಸ್ಥೆಯ ನಿರ್ದೇಶಕ (ಸಿ&ಜಾ)ರಾದ ಡಾ.ನಂದಿನಿದೇವಿ.ಕೆ, (ಭಾ.ಆ.ಸೇ.),ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರಾದ
ಶ್ರೀಮತಿ ಟಿ.ಇಂದಿರಾ ಹಾಗೂ ಸಂಸ್ಥೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.