December 24, 2024

ಬೆಂಗಳೂರು: ಮನಸ್ಸಿಗೆ ಐದು ನದಿಗಳಂತೆ ಕಣ್ಣು, ಕಿವಿ, ಮೂಗು, ಬಾಯಿ, ನಾಲಿಗೆ ಎಂಬ ನದಿಗಳು ಹರಿಯುತ್ತಿದೆ.
ಈ ಐದು ಇಂದ್ರಿಯಗಳು ನದಿಗಳಂತೆ ಉತ್ತಮ ಸಂಗತಿಗಳನ್ನು ಮಾತ್ರ ಸ್ವೀಕರಿಸಬೇಕು ಎಂದು ಅದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀಮನ್ನಿರಂಜನ, ಪ್ರಣವಸ್ವರೂಪಿ, ಪರಮಪೂಜ್ಯ ಜಗದ್ಗುರು ಶ್ರೀಶ್ರೀಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.
ಬಸವೇಶ್ವರನಗರದ ಗಂಗಮ್ಮ ತಿಮ್ಮಯ್ಯ ಕನ್ನನೇಷನ್ ಹಾಲ್ ನಲ್ಲಿ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ “ಸತ್ಸಂಗ ಸದ್ವಿಚಾರಗಳ ಸಂಪ್ರೋಕ್ಷಣೆ” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಇನ್ನೂಂದು ಬದುಕು ಇದೆ ಎಂಬ ಭಾವನೆಯಿಂದ ಜೀವನ ಸಾಗಿಸಬೇಕು. ಸತ್ಸಂಗದಲ್ಲಿ ಹಿರಿಯರು ಬರುವಾಗ ಜೊತೆಯಲ್ಲಿ ಮಕ್ಕಳನ್ನೂ ಕರೆತರಬೇಕು.
ಹೆಣ್ಣೂಂದು ಕಲಿತರೆ ಶಾಲೆಯೊಂದು ತೆರೆದಂತೆ, ಸಂಸ್ಕೃತಿಯಲ್ಲಿ ಬರುವ ಬಳುವಳಿ ಕುಟುಂಬದ ಎಲ್ಲರಿಗೂ ತಲುಪುತ್ತದೆ.
ಶ್ರೀಮಂತ, ಅಧಿಕಾರ ನಮ್ಮ ಹಣೆ ಮೇಲೆ ಇರುವುದಿಲ್ಲ. ಆಂಜನೇಯ ಆಡಿದ ನಾಲ್ಕು ಮಾತುಗಳಿಂದ ಶ್ರೀರಾಮ ದೇವರು ಎಲ್ಲವನ್ನೂ ಮರೆತರು. ಇಂತಹ ಶಕ್ತಿ ಬರಲು ಆಂಜನೇಯ ದೇವರಿಗೆ ನಾಲ್ಕು ವೇದಗಳು ಒಲಿದಿದೆ ಎಂಬರ್ಥ. ಮಹಾಜ್ಞಾನಿ, ಶಿಕ್ಷಣ ಸಾಧನೆ ಎಲ್ಲಾ ಬಲ್ಲವು ಎಂದು ತಿಳಿದುಕೊಂಡಿರುತ್ತೇವೆ. ಅದರೆ ದೋಣಿಯಲ್ಲಿ ಸಾಗಬೇಕಾದರೆ ದೋಣಿ ಹಗ್ಗ ಬಿಚ್ಚಿ ಸಾಗಬೇಕು, ಹಗ್ಗ ಕಟ್ಟಿದ ದೋಣಿಗೆ ಎಷ್ಟೇ ಮರದ ಹಾಯನ್ನು ಉಪಯೋಗಿಸಿ, ಶ್ರಮಿಸಿದರೂ ಮುಂದೆ ಹೋಗಲು ಸಾಧ್ಯವೇ ಇಲ್ಲ. ಮನಸ್ಸನ್ನು ಸರಿಯಾಗಿ ಬಳಕೆ ಮಾಡಿಕೊಂಡು, ಸಿದ್ದಾರ್ಥ ಬುದ್ದನಾದ, ಹೊರಗಿನ ಜಗತ್ತು ಕುರಿತು ಅರಿವು ಮೂಡಿಸಿಕೊಳ್ಳಬೇಕು.

ದೇಹ ಮನುಷ್ಯನಾಗಿದ್ದರು, ದೇಹಕ್ಕೆ ದಿನ ಸ್ನಾನ ಮಾಡಿದಂತೆ, ಬುದ್ದಿ ಮೇಲೆ ಬೀಳುವ ಬೆಳಕು ಮನಸ್ಸಿಗೆ ತಲುಪುತ್ತದೆ. ನಮ್ಮ ಮನಸ್ಸಿನ ಮಾನಸ ಸರೋವರ ಶುದ್ದಿಯಾಗಿರಬೇಕು. ಉತ್ತಮವಾದ ಸಂಗತಿಗಳನ್ನು ನೋಡಬೇಕು, ಕೆಟ್ಟ ಸಂಗತಿಗಳನ್ನು ಸ್ವೀಕರಿಸಿದರೆ ಆಗ ಮನಸ್ಸು ಹಾಳಾಗುತ್ತದೆ. ಅದ್ದರಿಂದ ಮನಸ್ಸನ್ನು ನಿಗ್ರಹ ಮಾಡಬೇಕು. ಮನಸ್ಸು ಸರಿಯಾದ ಮಾರ್ಗದಲ್ಲಿ ಹೋಗಬೇಕಾದರೆ ಯೋಗ, ಆಧ್ಯಾತ್ಮ ಕಡೆ ಪ್ರತಿಯೂಬ್ಬರೂ ಸಾಗಬೇಕು. ಮನುಷ್ಯ ವಿದ್ಯೆ, ಪ್ರವೃತ್ತಿ ಮತ್ತು ಸಹನೆ ಆಳವಡಿಸಿಕೊಳ್ಳಬೇಕು ಸನ್ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಜಯನಗರ ಶಾಖಾ ಮಠದ ಶ್ರೀಶ್ರೀಶ್ರೀ ಸೌಮ್ಯನಾಥ ಸ್ವಾಮೀಜಿ,
ಮಾಜಿ ಸಚಿವರು ಹಾಗೂ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಯ್ಯ, ರಾಜಾಜಿನಗರದ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಸುರೇಶ್ ಕುಮಾರ್, ಬಿಜೆಪಿ ಮುಖಂಡರಾದ ಡಾ.ಅರುಣ್ ಸೋಮಣ್ಣ, ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರುಗಳಾದ ಕೆ.ಉಮೇಶ್ ಶೆಟ್ಟಿ, ದಾಸೇಗೌಡ, ಮೋಹನ್ ಕುಮಾರ್, ಬಾಬಿ ವೆಂಕಟೇಶ್, ಬಿಜೆಪಿ ಮುಖಂಡರುಗಳಾದ ವೇಣು, ಶ್ರೀಧರ್ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಶ್ರೀಮಠದ ಭಕ್ತ ವೃಂದದವರು ಸತ್ಸಂಗದಲ್ಲಿ ಪಾಲ್ಗೊಂಡಿದ್ದರು. ಬ್ರಹ್ಮಚಾರಿ ಶ್ರೀಸಾಯಿ ಕೀರ್ತಿನಾಥ್‌ ಮತ್ತು ತಂಡದವರಿಂದ ದೇವರ ನಾಮ, ಭಜನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.


Leave a Reply

Your email address will not be published. Required fields are marked *