December 24, 2024

ಉಡುಪಿ: 29ನೇ ವರ್ಷದ ಶ್ರಾವಣ ಮಾಸದ ಪ್ರಯುಕ್ತ ಉಡುಪಿ ಜಿಲ್ಲೆಯ ಕೋಟದ ಶಾಂತಮೂರ್ತಿ ಶ್ರೀಶನೀಶ್ವರ ದೇವಸ್ಥಾನದಲ್ಲಿ ನಾಳೆ ಆ.31 ರಂದು ಬೆಳಿಗ್ಗೆ 9ಕ್ಕೆ “ಸಾಮೂಹಿಕ ಶನಿಶಾಂತಿ”(ವಿಶೇಷ ಶನಿ ಪ್ರದೋಷ) ಜರಗಲಿರುವುದು. ಅಂದು ದೇವಳದಲ್ಲಿ ವಿಶೇಷ ಹೂವಿನ ಅಲಂಕಾರ ಪೂಜೆ,
ಮಧ್ಯಾಹ್ನ 12.30ಕ್ಕೆ ಮಹಾ ಪೂಜೆ, ತೀರ್ಥ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ “ಮಹಾ ಅನ್ನಸಂತರ್ಪಣೆ” , ಭಕ್ತಾಧಿಗಳಿಂದ ಹರಕೆಯ “ತುಲಾಭಾರ ಸೇವೆ” ಹಾಗೂ ಶ್ರೀಸ್ವಾಮಿಯ “ದರ್ಶನ ಸೇವೆ” ಕಾರ್ಯಕ್ರಮ ಜರಗಲಿರುವುದು.ಸಾಯಂಕಾಲ 4 ಗಂಟೆಗೆ “ರಾಜ ವಿಕ್ರಮಾದಿತ್ಯ ಚರಿತ್ರೆ” ಎಂಬ ಶ್ರೀಶನಿಕಥಾ ಪಾರಾಯಣ ನಡೆಯಲಿರುವುದು.
ಹಾಗೂ ರಾತ್ರಿ 8ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ ಎಂದು ದೇವಳದ ಪಾತ್ರಿಗಳಾದ ಭಾಸ್ಕರ್ ಸ್ವಾಮಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply

Your email address will not be published. Required fields are marked *