ಬೆಂಗಳೂರು: ಜಯನಗರದ ಐದನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮ ಪೂಜ್ಯ ಶ್ರೀ1008 ಶ್ರೀಶ್ರೀಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಶ್ರೀಮೂಲ ರಾಮಚಂದ್ರದೇವರ ಸಂಸ್ಥಾನ ಪೂಜೆಯನ್ನು ನೆರವೇರಿಸಿದ ನಂತರ ರಾಯರ 24ಅಡಿ ಎತ್ತರದ ರಾಯರ ಪ್ರತೀಕವನ್ನು ಪುಷ್ಪಾರ್ಚನೆ ಮತ್ತು ಮಹಾ ಮಂಗಳಾರತಿಯೊಂದಿಗೆ ಉದ್ಘಾಟಿಸಿದರು.
ರಾಯರ ಅಂತರಂಗ ಭಕ್ತರಾದ, ಪ್ರತೀಕದ ಸಂಪೂರ್ಣ ವೆಚ್ಚವನ್ನು ಭರಿಸಿದ ಮುಕುಂದ ಕೃಷ್ಣ ಅವರಿಗೂ ಮತ್ತು ಈ ಚಿತ್ರಕಲೆ ನಿರ್ಮಾಣ ಮಾಡಿದ ಶಿವದತ್ತರಿಗೂ ರಾಯರ ಶೇಷ ವಸ್ತ್ರ, ಫಲ ಮಂತ್ರಾಕ್ಷತೆ ಕೊಟ್ಟು ಶ್ರೀಗಳು ಅನುಗ್ರಹಿಸಿದರು. ವಿಶೇಷವಾಗಿ ಈ ರಾಯರ ಪ್ರತೀಕವೂ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ಭಕ್ತರ ಸಹಕಾರದೊಂದಿಗೆ ಭಕ್ತರಿಂದ, ಭಕ್ತರಿಗಾಗಿ, ಭಕ್ತರ ಅನುಗ್ರಕ್ಕಾಗಿ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳ ಮಠದ ಪರಮ ಪೂಜ್ಯ ಶ್ರೀ1008 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿತು.
ಬಹಳ ಸುಂದರ ಅಪರೂಪವಾದ ಕಾಮಧೇನು- ಕಲ್ಪವೃಕ್ಷ ಶ್ರೀರಾಘವೇಂದ್ರ ಸ್ವಾಮಿಗಳ ಪ್ರತೀಕದ ಸಂಪೂರ್ಣ ಜವಾಬ್ದಾರಿಯ ನಿರ್ವಹಣೆಯನ್ನು ಮಾಡಿದ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್.ಕೆ.ವಾದಿಂದ್ರ ಆಚಾರ್ಯರಿಗೆ ಶ್ರೀಗುರುರಾಯರ ಅನುಗ್ರಹ ಸದಾಕಾಲ ಇರಲಿ ಎಂದು ಅನುಗ್ರಹಿಸಿದರು.
ಪೂರ್ಣಪ್ರಜ್ಞ ವಿದ್ಯಾ ಪೀಠದ ಹತ್ತಿರ ಇರುವ ಸ್ಥಪತಿ ಕ್ರಿಯೇಶನ್ಸ್ ನ ಮುಖ್ಯಸ್ಥರಾದ ಎನ್.ಶಿವದತ್ತ ರವರ ನಿರ್ದೇಶನದಲ್ಲಿ ಸುಮಾರು ಎರಡೂವರೆ ತಿಂಗಳಿನ ಗಡುವಿನಲ್ಲಿ 24 ಅಡಿ ಎತ್ತರದ 12 ಅಡಿ ಅಗಲ 3 ಅಡಿ ದಪ್ಪ ಉಳ್ಳ ಎಫ್.ಆರ್.ಪಿ. ಮೌಲ್ಡ್ ನಿಂದ “ಕಾಮಧೇನು ಕಲ್ಪವೃಕ್ಷ “ಶ್ರೀ ರಾಘವೇಂದ್ರ ಸ್ವಾಮಿಗಳ ಮತ್ತು ಶ್ರೀರಾಮ ಕೃಷ್ಣರ” ಭಾವಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಶಿವದತ್ತರವರ ತಂಡವರಾದ ರವಿಕುಮಾರ್, ಪ್ರವೀಣ್ ಕುಮಾರ್, ಶ್ರೀರಾಮ್, ನಾಗರಾಜ್, ಪ್ರದೀಪ್, ಶರತ್ ಚಂದ್ರ ಮತ್ತು ಚಾಂದ್ ಇವರುಗಳ ಸಹಕಾರದಿಂದ ಒಟ್ಟುಗೂಡಿ ಸುಂದರವಾದ ಈ ಪ್ರತೀಕವನ್ನು ಶ್ರದ್ಧೆ ಮತ್ತು ಭಕ್ತಿ ತನು ಮನದಿಂದ ನಿರ್ಮಾಣ ಮಾಡಿ ಶ್ರೀರಾಘವೇಂದ್ರ ಸ್ವಾಮಿಗಳ ಅನುಗ್ರಹಕ್ಕೆ ಪಾತರಾಗಿದ್ದಾರೆ ಎಂದು ಶ್ರೀಮಠದ ಪುರೋಹಿತರಾದ ನಂದ ಕಿಶೋರ್ ಆಚಾರ್ಯರು ತಿಳಿಸಿದರು.