ಕಾರವಾರ: ನಿರಂತರವಾಗಿ ಕರಾವಳಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಗಾಳಿ ಮಳೆಯಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಚತುಷ್ಪಥ ಹೆದ್ದಾರಿ ಗುತ್ತಿಗೆ ಪಡೆದಿರುವ ಐ.ಅರ್.ಬಿ ಯವರು ಮಾಡಿದ ಅವೈಜ್ಞಾನಿಕ ಮತ್ತು ಅಪೂರ್ಣ ಕಾಮಗಾರಿಯಿಂದ ಕುಮಟಾ, ಅಂಕೋಲಾ ಮಾರ್ಗ ಮಧ್ಯೆ ಶಿರೂರು ಬೊಮ್ಮಯ್ಯ ದೇವಸ್ಥಾನದ ಬಳಿ ಭಾರಿ ಪ್ರಮಾಣದ ಗುಡ್ಡ ಕುಸಿತವಾಗಿದೆ.
ಗುಡ್ಡ ಕುಸಿತದ ಪರಿಣಾಮ ಹೆದ್ದಾರಿಯ ಅಂಚಿನ ಭಾಗದಲ್ಲಿದ್ದ ಸಣ್ಣಪುಟ್ಟ ಗೂಡಾಅಂಗಡಿ ಸಂಪೂರ್ಣ ನಾಶವಾಗಿದೆ. ಅಂಗಡಿಯಲ್ಲಿ ಇದ್ದವರು ಮಣ್ಣಿನ ಅಡಿಯಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಹಾಗೆಯೇ ಗುಡ್ಡ ಕುಸಿತ ರಬಸಕ್ಕೆ ಹೆದ್ದಾರಿಯಲ್ಲಿ ನಿಲ್ಲಿಸಿಟ್ಟ ಗ್ಯಾಸ್ ಟ್ಯಾಂಕರ್ ವಾಹನ ಗಂಗಾವಳಿ ನದಿಯಲ್ಲಿ ಬಿದ್ದು ಕೊಚ್ಚಿ ಹೋಗಿದೆ. ಗುಡ್ಡ ಕುಸಿದ ರಭಸಕ್ಕೆ ನದಿಯಲ್ಲಿ ಮಣ್ಣು ಜೋರಾಗಿ ಜರಿದ ಪರಿಣಾಮ ನದಿ ತೀರದ ಮನೆಯು ಕೊಚ್ಚಿ ಹೋಗಿದೆ. ಲಾರಿಯ ಚಾಲಕ ಹಾಗೂ ಮುತ್ತಿತರರು ಮಣ್ಣಿನಲ್ಲಿ ಸಿಲುಕ್ಕಿದ್ದಾರೆ ಎಂದು ತಿಳಿದು ಬಂದಿದೆ.
ವಿಷಯ ತಿಳಿದ ತಕ್ಷಣ ಪೋಲಿಸರು, ಅಗ್ನಿಶಾಮಕ, ಸುರಕ್ಷತಾ ಅಂಬುಲೆನ್ಸ್ ಮುತ್ತಿತರರು ಸ್ಥಳಕ್ಕೆ ಬಂದು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮತ್ತಷ್ಟು ಗುಡ್ಡ ಕುಸಿಯುವ ಭೀತಿ ಇದೆ ಎಂದು ತಿಳಿದು ಬಂದಿದೆ. ಅಂಕೋಲ ಕಾರವಾರ ಶಾಸಕರು ಸತೀಶ್ ಶೈಲ್ ವಿಷಯ ತಿಳಿದ ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಪೋನ್ ಕರೆ ಮಾಡಿ ಸ್ಥಳಿಯರಿಗೂ ಹಾಗೂ ಹೆದ್ದಾರಿ ಸಂಚಾರಿಗಳಿಗೂ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದಾಗಿದ್ದು, ರಸ್ತೆ ಸಂಚಾರದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದೆ. ಗುಡ್ಡ ಕುಸಿತದ ಪ್ರಮಾಣ ಹೆಚ್ಚಾಗುತ್ತಿದ್ದು ಮುಂಜಾಗ್ರತಾ ಕ್ರಮವನ್ನು ಅಧಿಕಾರಿಗಳು ವಹಿಸಿಕೊಂಡಿದ್ದಾರೆ.
-ಆರತಿ ಗಿಳಿಯಾರ್.