ಬೆಂಗಳೂರು: ಬಸವನಗುಡಿಯ ಗೋವರ್ಧನ ಕ್ಷೇತ್ರ ಶ್ರೀಪುತ್ತಿಗೆ ಮಠದಲ್ಲಿ ಅದಮಾರು ಮಠದ ಹಿರಿಯ ಶ್ರೀಪಾದರಾದ
ಪರಮಪೂಜ್ಯ ಶ್ರೀಶ್ರೀಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರಿಂದ ಇಂದು ಶಯನೀ ಏಕಾದಶಿಯ ಅಂಗವಾಗಿ ನೆರೆದ ಭಕ್ತರಿಗೆ ತಪ್ತಮುದ್ರಾಧಾರಣೆ ನಡೆಯಿತು.
ಪೂಜ್ಯರು ಬೆಳಿಗ್ಗೆ 6.30ರಿಂದ 8.30 ರವರೆಗೆ ನೆರವೇರಿಸಿ ಬಳ್ಳಾರಿಗೆ ತೆರಳಿದರು.
ಸಾಯಂಕಾಲ 5 ಗಂಟೆಯಿಂದ 8 ರವರೆಗೆ ಭಕ್ತರ ಅನುಕೂಲಕ್ಕಾಗಿ ಪರಮ ಪೂಜ್ಯ ಸುವಿದ್ಯೇದ್ರತೀರ್ಥ ಶ್ರೀಪಾದರಿಂದ ಮುದ್ರಾಧಾರಣೆ ನಡೆಯಲಿದೆ.