ತುಮಕೂರು: ನಮ್ಮ ಕೆ.ಸಿ.ರೆಡ್ಡಿ ಸರೋಜಮ್ಮ ಫೌಂಡೇಷನ್ ಗ್ರಾಮೀಣ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಸಂಸ್ಥಾಪಕರಾದ ಶ್ರೀಮತಿ ವಸಂತ ಕವಿತಾ ಹೇಳಿದರು. ಕೆ.ಸಿ.ರೆಡ್ಡಿ ಫೌಂಡೇಷನ್
ಸಿರ ತಾಲೂಕಿನ 25 ಶಾಲೆಯ 110ಮಕ್ಕಳಿಗೆ 4ದಿನಗಳ ಪ್ರವಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
“ಭಾರತರತ್ನ” ಸರ್.ಎಂ.ವಿಶ್ವೇಶ್ವರಯ್ಯ, ಭಾರತರತ್ನ ವಿಜ್ಞಾನಿ ಸಿ.ಎನ್.ರಾವ್ ರವರು ನಮ್ಮ ಭಾಗದ ವಿಶ್ವವಿಖ್ಯಾತಿ ಮಹಾನ್ ಚೇತನಗಳು. ಗ್ರಾಮೀಣ ಭಾಗದ ಮಕ್ಕಳಿಗೆ ವಿಜ್ಞಾನ ವಿಷಯದ ಕುರಿತು ಆಸಕ್ತಿ ಇರುವ ಮಕ್ಕಳಿಗೆ ಪ್ರೋತ್ಸಾಹ ನೀಡಿದಾಗ ಅವರೂ ಸಹ ಮುಂದಿನ ದಿನಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಗ್ರಾಮೀಣ ಭಾಗದ ಮಕ್ಕಳು ಮುಂದೆ ಬರಬೇಕು, ವಿಜ್ಞಾನ ಕುರಿತು ಹೆಚ್ಚು ಅಧ್ಯಯನ ಮಾಡಿದಾಗ ಕೃಷಿ, ಪರಿಸರ ಮತ್ತು ಕೈಗಾರಿಕೆಗಳ ಅಭಿವೃದ್ದಿಗೆ ಸಹಕಾರ ವಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಇಒ ಕೃಷ್ಣಪ್ಪ, ಶಿಕ್ಷಕ ವೃಂದವರಾದ ರಶ್ಮಿ, ಉಷಾರಾಣಿ, ರವೀಂದ್ರ, ಮಂಜುನಾಥ್ ರವರು ಮಕ್ಕಳಿಗೆ ಶುಭ ಕೋರಿ, ಬೀಳ್ಕೊಡುಗೆ ನೀಡಿದರು.