December 24, 2024

ಉಡುಪಿ: ನಮ್ಮ ನಾಡು, ನುಡಿ ಸಂಸ್ಕೃತಿಗಾಗಿ ನಾವೆಲ್ಲರೂ ಕಟಿಬದ್ಧರಾಗಿ ಕಾರ್ಯ ನಿರ್ವಹಿಸಬೇಕು ಎಂದು ಕಸಾಪ ಜಿಲ್ಲಾ ಕಾರ್ಯಕಾರಿ ಸದಸ್ಯ ಭುವನ ಪ್ರಸಾದ್ ಹೆಗ್ಡೆ ಹೇಳಿದರು.

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಎಂ.ಜಿ.ಎಂ ಕಾಲೇಜಿನ ಮುಂಭಾಗದ ಆಟೋ ನಿಲ್ದಾಣದಲ್ಲಿ ನ.1 ರಂದು ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ
ಕನ್ನಡ ಧ್ವಜ ಹಸ್ತಾಂತರಿಸಿ ಅವರು ಮಾತನಾಡಿದರು. ರಾಜ್ಯೋತ್ಸವ ನಾಡಿನ ಶ್ರೇಷ್ಠ ಹಬ್ಬವಾಗಿದೆ. ನಮ್ಮ ನಾಡು ನುಡಿ ಸಂಸ್ಕೃತಿಗಾಗಿ ನಾವೆಲ್ಲರೂ ಕಟಿಬದ್ಧರಾಗಿ ಕಾರ್ಯ ನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಕಸಾಪದ ಕಾರ್ಯ ಶ್ಲಾಘನೀಯ ಎಂದರು.

ಬ್ರಹ್ಮಾವರ ತಾಲೂಕು ಕಸಾಪ ಪೂರ್ವ ಅಧ್ಯಕ್ಷ ನಾರಾಯಣ ಮಡಿ ಮಾತನಾಡಿ ನಮ್ಮ ರಾಜ್ಯ ನಮ್ಮ ದೇಶದಲ್ಲಿ ಅಪೂರ್ವದ ರಾಜ್ಯವಾಗಿದ್ದು, ಭಾಷಾವಾರು ಪ್ರಾಂತ್ಯ ಒಗ್ಗೂಡಿಸಿದ ಬಳಿಕ ನಮ್ಮ ರಾಜ್ಯ 69ನೇ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ಕನ್ನಡ ಭಾಷೆಯು ನಮ್ಮೆಲ್ಲರ ಮನೆ ಮನದಲ್ಲಿರಬೇಕು ಎಂದರು.

ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್.ಪಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ರಿಕ್ಷಾ ಚಾಲಕರ ಮತ್ತು ಮಾಲಕರ ಸಂಘದ ಅಧ್ಯಕ್ಷ ರವಿ, ಕಸಾಪ ತಾಲೂಕು ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜನಿ ವಸಂತ್, ಗೌ.ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಶ್ರೀನಿವಾಸ ರಾವ್, ವಸಂತ್, ಸುಮಿತ್ರ ಕೆರೆಮಠ, ರಾಮಾಂಜಿ, ವಿರಣ್ಣ ಕುರುವತ್ತಿಗೌಡರ್, ರಾಘವೇಂದ್ರ ಕರ್ವಾಲು, ಸಂಯೋಜಕ ಉಮೇಶ್ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *