December 23, 2024

ಅಯೋಧ್ಯೆ: 500 ವರ್ಷಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. 2024ರ ಜನವರಿ 22 ಎಲ್ಲಾ ಭಾರತೀಯರ ವರ್ಷಗಳ ಕನಸು ನನಸಾದ ದಿನ. ಶ್ರೀರಾಮ ಲಲ್ಲಾ ಪ್ರತಿಷ್ಠಾಪನೆಯ ಮೊದಲ ವರ್ಷದ ಸಂಭ್ರಮಾಚರಣೆ ಶ್ರೀರಾಮೋತ್ಸವ ವಿಶ್ವದಾದ್ಯಂತ ಅದ್ದೂರಿಯಾಗಿ ಆಚರಣೆ ಮಾಡಲು ಎಲ್ಲರೂ ಸಜ್ಜಾಗುತ್ತಿದ್ದಾರೆ.

ಅಯೋಧ್ಯೆಯ ಶ್ರೀರಾಮ ಸೇವಾ ಪ್ರತಿಷ್ಠಾನ ಹಾಗೂ ಕರ್ನಾಟಕದ ಚಿತ್ತಾರ ಸಂಸ್ಥೆಯು ರಾಮನ ಮೇಲಿನ ಭಕ್ತಿ, ಪ್ರೀತಿಯಿಂದ ದೇಶವನ್ನು ಒಗ್ಗೂಡಿಸುವ ಕಾರ್ಯಕ್ರಮಗಳನ್ನು ಎರಡು ಸಂಸ್ಥೆಗಳು ಸೇರಿ ಆಯೋಜಿಸಿವೆ. ಶ್ರೇಷ್ಠ ಗ್ರಂಥವಾದ ರಾಮಾಯಣಕ್ಕೆ ಸಂಬಂಧಿಸಿದಂತೆ ಡ್ಯಾನ್ಸ್, ಸಿಂಗಿಂಗ್, ಡ್ರಾಯಿಂಗ್, ರಾಮಾಯಣ ಡ್ರೆಸ್ ಸ್ಪರ್ಧೆ ಹಾಗೂ ರಾಮಾಯಣ ಕ್ವಿಜ್ ಸ್ಪರ್ಧೆಗಳಲ್ಲಿ ದೇಶದಾದ್ಯಂತ ಜನರು ಆನ್ ಲೈನ್ ಮೂಲಕ ಭಾಗವಹಿಸಬಹುದು. ಭಾಗವಹಿಸುವ ಪ್ರತಿಯೊಬ್ಬರಿಗೂ ಅಯೋಧ್ಯೆಯಿಂದ ಪ್ರಮಾಣ ಪತ್ರ ಹಾಗೂ ರಾಮಲಲ್ಲಾ ಪದಕ ನಿಮ್ಮಮನೆ ತಲುಪಿಸಲಾಗುವುದು.

ಅಯೋಧ್ಯೆಯಲ್ಲಿ ನಡೆಯುವ ಭವ್ಯ ಸಮಾರಂಭದಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅಷ್ಟೇ ಅಲ್ಲ ವಿಜೇತರ ಪ್ರಯಾಣದ ಸಂಪೂರ್ಣ ಖರ್ಚುನ್ನು ಭರಿಸಲಾಗುವುದು. ಇದೇ ಸಂದರ್ಭದಲ್ಲಿ ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರನ್ನು “ರಾಮಲಲ್ಲಾ ಪುರಸ್ಕಾರ-2025” ನೀಡಿ ಸನ್ಮಾನಿಸಲಾಗುವುದು. ಇಷ್ಟು ಮಾತ್ರವಲ್ಲದೆ ವಿಶೇಷವಾಗಿ ಆಯೋಜಿಸಲಾಗಿರುವ ದರ್ಶನ್ ವಿಭಾಗದಲ್ಲಿ ನೋಂದಾಯಿತ ಅದೃಷ್ಟವಂತ ಕುಟುಂಬದ ಆರು ಸದಸ್ಯರಿಗೆ ಸಂಪೂರ್ಣ ಉಚಿತ ದರ್ಶನವನ್ನು ಆಯೋಜಿಸಲಾಗಿದೆ. ತಾವು ಕೂಡ ರಾಮೋತ್ಸವದ ಭಾಗವಾಗಲು ಈ ಸಂಖ್ಯೆಗೆ 9880548451 ಜೈ ಶ್ರೀ ರಾಮ್ ಎಂದು ವಾಟ್ಸಪ್ ಮಾಡಿ ನೋಂದಾಯಿಸಿಕೊಳ್ಳಬಹುದಾಗಿದೆ. ಈ ಯೋಜನೆಗೆ ಯತಿ ಕಾರ್ಪ ಇಂಡಿಯಾ ಸಂಸ್ಥೆ ತಂತ್ರಜ್ಞಾನ ಸಹಕಾರ ಒದಗಿಸುತ್ತಿದೆ.

ಸ್ಪರ್ಧೆಯ ವಿವರ:- ರಾಮಾಯಣ ಡ್ರೆಸ್ ಕಾಂಪಿಟಿಷನ್, ಸಂಗೀತ/ಗಾಯನ ಸ್ಪರ್ಧೆ, ರಾಮಾಯಣ ಕ್ವಿಜ್, ಚಿತ್ರಕಲೆ, ಸೋಲೊ ಡಾನ್ಸ್ ಸ್ಪರ್ಧೆಯಲ್ಲಿ ಜೂನಿಯರ್ ಮತ್ತು ಸೀನಿಯರ್ ಎಂಬ ವಿಭಾಗ ಇರಲಿದೆ. ಇದರಲ್ಲಿ ಜೂನಿಯರ್ ವಿಭಾಗದಲ್ಲಿ ಭಾಗವಹಿಸುವವರು 13 ವರ್ಷದ ಒಳಗಿನವರಾಗಿರಬೇಕು, ಹಾಗೆ ಸೀನಿಯರ್ ವಿಭಾಗದಲ್ಲಿ 13 ವರ್ಷ ಮೇಲ್ಪಟ್ಟವರಾಗಿರಬೇಕು. ಎಲ್ಲಾ ಸ್ಪರ್ಧೆಗೂ ಇದೇ ನಿಯಮ ಅನ್ವಯಿಸುತ್ತದೆ.

ಅಯೋಧ್ಯೆಯ ದರ್ಶನ ಪಡೆಯುವುದಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ.
ಈ ಕಾರ್ಯಕ್ರಮದಲ್ಲಿ ಅಯೋಧ್ಯೆಯ ಶ್ರೀರಾಮ ಸೇವಾ ಪ್ರತಿಷ್ಠಾನದ ಸಂಸ್ಥಾಪಕರಾದ ಶಶಿಕಾಂತ್ ಶರ್ಮಾಜೀ ಮಾತನಾಡಿ “ರಾಮಲಲ್ಲಾ” ಪ್ರತಿಷ್ಠಾಪನೆಯಾಗಿ ವರ್ಷ ತುಂಬಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಈ ಮೂಲಕ ನಾವೆಲ್ಲಾ ಸೇರಿ ಅಯೋಧ್ಯೆಯಲ್ಲಿ ಒಂದು ಅದ್ಭುತ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದೇವೆ. ಅದರಲ್ಲಿ ಎಲ್ಲರೂ ಭಾಗವಹಿಸಿ ರಾಮನ ಭಕ್ತಿಗೆ ಪಾತ್ರರಾಗಬೇಕು. ಹಾಗೆಯೇ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುವುದಕ್ಕೆ ನಿಮ್ಮೆಲ್ಲರ ಸಹಕಾರವು ಬಹಳ ಮುಖ್ಯವಾಗಿದೆ ಎಂದರು.

ಶಿಕ್ಷಣ ತಜ್ಞ ಅಮೆರಿಕಾದ ಯೋಗ ಯುನಿವರ್ಸಿಟಿಯ ಡೀನ್ ಆಗಿರುವ ಡಾ.ಸೆಲ್ವರಾಜ್ ನಾರಾಯಣ್ ಅವರು ಮಾತನಾಡಿ ರಾಮನ ಭಕ್ತಿ, ಭಾವಕ್ಕೆ ನಾವೆಲ್ಲ ಒಳಗಾದಾಗ ಜೀವನ ಸಂತೃಪ್ತಗೊಳ್ಳುತ್ತದೆ. ಭಾರತೀಯರ ಕನಸು ನನಸಾದ ದಿನ ಮತ್ತೆ ಬಂದಿದೆ. ಈ ಸಂಭ್ರಮವನ್ನು ನಾವೆಲ್ಲ ಸೇರಿ ಅಯೋಧ್ಯೆಯಲ್ಲಿ ಆಚರಿಸಬೇಕು. ಹಾಗೆಯೇ ರಾಮನ ಮೇಲಿನ ಭಕ್ತಿಯನ್ನು ತೋರ್ಪಡಿಸುವ ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ರಾಮನ ಕೃಪೆಗೆ ಪಾತ್ರರಾಗಬೇಕು ಎಂದರು.

ಚಿತ್ತಾರ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಶಿವಕುಮಾರ್ ಮಾತನಾಡಿ ನಮ್ಮ ಸಂಸ್ಥೆ ಕಳೆದ ವರ್ಷ ಅಯೋಧ್ಯೆಯಲ್ಲಿ “ರಾಮಲಲ್ಲಾ” ಪ್ರತಿಷ್ಠಾಪನೆಯಾದಾಗಲೇ ನಮ್ಮ ಚಿತ್ತಾರ ಸಂಸ್ಥೆ ವತಿಯಿಂದ ಪುಣ್ಯಭೂಮಿ ಅಯೋಧ್ಯೆಗೆ ಭೇಟಿ ನೀಡಿ, ದರ್ಶನ ಭಾಗ್ಯ ಪಡೆದುಕೊಂಡು ಬಂದೆವು. ಎಲ್ಲರಿಗೂ ಅಯೋಧ್ಯೆಗೆ ಹೋಗಬೇಕು ಎಂಬ ಆಸೆ ಇದ್ದೇ ಇರುತ್ತದೆ. ರಾಮನ ಮೇಲಿನ ಭಕ್ತಿಯನ್ನು ತೋರ್ಪಡಿಸುವ ಹಂಬಲವೂ ಇರುತ್ತದೆ. ಈಗ ಚಿತ್ತಾರ ಸಂಸ್ಥೆಯೂ ಈ ಮಹಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿರುವುದು ನಮ್ಮ ಭಾಗ್ಯ. ನೀವೆಲ್ಲಾ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಪುಣ್ಯ ಭೂಮಿ ಅಯೋಧ್ಯೆಗೆ ಬಂದು ರಾಮನನ್ನು ಕಣ್ತುಂಬಿಕೊಳ್ಳಬೇಕು ಎಂದರು.


Leave a Reply

Your email address will not be published. Required fields are marked *