ಬೆಂಗಳೂರು: ನಾಡಿನಲ್ಲಿ ಉತ್ತಮ ಮಳೆ- ಬೆಳೆಯಾಗಲೆಂದು ರುದ್ರಯಾಗವನ್ನು ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಯಿತು ಎಂದು ಮಹರ್ಷಿ ಶ್ರೀಶ್ರೀಶ್ರೀ ಆನಂದ ಗುರೂಜೀ ಹೇಳಿದರು.
ನಗರದ ನಾಗವಾರಪಾಳ್ಯದ ಮುತ್ಯಾಲಮ್ಮ ದೇವಿ ದೇವಸ್ಥಾನದಲ್ಲಿ ಸಮಾಜಸೇವಕ ಶ್ರೀಧರ್ ಕೃಷ್ಣಪ್ಪ ನೇತೃತ್ವದಲ್ಲಿ ಮಳೆಗಾಗಿ ಭಗವಂತನಿಗೆ ವಿಶೇಷ ಪೂಜೆ ಹಾಗೂ ರುದ್ರಯಾಗ ನಡೆಸಿ ಅವರು ಮಾತನಾಡಿದರು.
ಸಮಾಜಸೇವಕ ಶ್ರೀಧರ್ ಕೃಷ್ಣಪ್ಪ ಮಾತನಾಡಿ, ನಾಡಿನಲ್ಲಿ ಸುಭಿಕ್ಷೆ ಕಾಣಲೆಂದು ತಾಯಿ ಮುತ್ಯಾಲಮ್ಮನ ಸಾನಿಧ್ಯದಲ್ಲಿ ಮಹಾರುದ್ರನಿಗೆ ರುದ್ರಯಾಗ ಹಾಗೂ ಸುಮಂಗಲಿಯರಿಗೆ ಅರಿಶಿನ ಕುಂಕುಮ, ವಸ್ತ್ರದಾನ ಮಾಡಲಾಗಿದೆ ಎಂದು ಹೇಳಿದರು.
ಮಹರ್ಷಿಗಳನ್ನು ಹೂವಿನ ಪಲ್ಲಕ್ಕಿಯಲ್ಲಿ ಕಲಾತಂಡಗಳೊಂದಿಗೆ ಮೆರವಣಿಗೆ ಮೂಲಕ ಬರ ಮಾಡಿಕೊಂಡರು. ಇದೇವೇಳೆ ಮಹಿಳೆಯರು ತಲೆಯ ಮೇಲೆ ಕಳಸ ಹೊತ್ತು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಶ್ರೀನಿವಾಸ್ ಗುರುಜೀ, ಹಿರಿಯ ಮುಖಂಡ ಹೂಡಿ ವಿಜಯ್ ಕುಮಾರ್, ಎಸ್.ಆನಂದ್ ಕುಮಾರ್, ವಕೀಲರಾದ ಜಿ.ನಾರಾಯಣ ಸ್ವಾಮಿ, ಗಜೇಂದ್ರ (ಗಜ್ಜಿ) ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.