ಉಡುಪಿ: ಖ್ಯಾತ ಪುಟ್ಟ, ಪುಟಾಣಿ ಕಲಾವಿದೆ ಹತ್ತು ವರ್ಷದ ಕು.ಗಂಗಾ ಶಶಿಧರ್ ರಿಂದ ವಯಲಿನ್ ವಾದನ ಕಛೇರಿ ಕಾರ್ಯಕ್ರಮವು ಗುರುವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಿತು.
ಅಪಾರ ಜನಪ್ರಿಯತೆ ಪಡೆದಿರುವ ಈ ಬಾಲ ಕಲಾವಿದೆಯನ್ನು ಪರ್ಯಾಯ ಪೀಠಾಧೀಶರು ಹಾಗೂ ಪುತ್ತಿಗೆ ಮಠಾಧೀಶರಾದ ಶ್ರೀಶ್ರೀಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂ ಗಳವರು ಶ್ರೀಕೃಷ್ಣ ಪ್ರಸಾದವನ್ನು ನೀಡಿ ಹರಸಿದರು. ಈ ಸಂದರ್ಭದಲ್ಲಿ ಗುರುಗಳಾದ ವಿದ್ವಾನ್ ಅನುರೂಪ್, ಗಾಂಧಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಹರಿಶ್ಚಂದ್ರ ದಂಪತಿಗಳು ಮುಂತಾದವರು ಉಪಸ್ಥಿತರಿದ್ದರು.
ಸಂಗೀತ ಗಾನ ಸುಧೆಯನ್ನು ಗಾಂಧಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಹರಿಶ್ಚಂದ್ರ ರವರು ತಮ್ಮ ಆಸ್ಪತ್ರೆಯ 30 ನೇ ವರ್ಧಂತ್ಯುತ್ಸವದ ನಿಮಿತ್ತ ಪ್ರಾಯೋಜಿಸಿದ್ದರು.