ಬೆಂಗಳೂರು:
ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿಯವರ ನೂತನ ಕೃತಿ “ಬೆಟ್ಟದೊಡೆಯನ ಭಕ್ತಾ ಗ್ರೇಸರ ತಾಳ್ಲಪಾಕ ಅನ್ನಮಾಚಾರ್ಯರು” ಶ್ರೀನಿವಾಸನ ಭಕ್ತರಿಗೆ ದೊರೆತ ರಸಪ್ರಸಾದವಾಗಿದೆ.
ಕೇವಲ ಶ್ರೀಅಣ್ಣಮಾಚಾರ್ಯರ ಬಗ್ಗೆ ಸೂಕ್ತ ಮಾಹಿತಿಯಲ್ಲದೆ, ತಿರುಪತಿ ದೇವಸ್ಥಾನ, ತಿಮ್ಮಪ್ಪ, ಶ್ರೀನಿವಾಸನಾಗಿ ಕಲಿಯುಗದಲ್ಲಿ ಈ ಭುವಿಯಲ್ಲಿ ಬಂದು ನಿಂತಿದ್ದು, ಸವಿಸ್ತಾರವಾಗಿ ಶ್ರೀನಿವಾಸ ಕಲ್ಯಾಣ, ಕಲ್ಯಾಣಕ್ಕೆ ಕಾರಣ, ಲಕ್ಷ್ಮಿದೇವಿ ಪತಿಯೊಡನೆ ಜಗಳವಾಡಿಕೊಂಡು ಹೋಗಿ ಕೊಲ್ಲಾಪುರದಲ್ಲಿ ನೆಲೆಸಿದ್ದು, ಅಸುರನ ಕೊಂದಿದ್ದು, ತಿರುಪತಿಯ ಏಳು ಬೆಟ್ಟಗಳು, ಒಂದೊಂದು ಯುಗದಲ್ಲೂ ಬೇರೆ ಬೇರೆ ಹೆಸರುಗಳು ಬರಲು ಕಾರಣ ಇತ್ಯಾದಿ ಸಮಸ್ತ ವಿಷಯಗಳನ್ನು ವಾದಿರಾಜರ ಕೃತಿಯ ಹಿನ್ನೆಲೆಯಲ್ಲಿ ರೋಚಕವಾಗಿ ಸವಿಸ್ತಾರವಾಗಿ ಮನಮುಟ್ಟುವಂತೆ ಚೆನ್ನಾಗಿ ತಿಳಿಸಿದ್ದಾರೆ.
ಶಬ್ದಗಳ ಗಾಂಭೀರ್ಯ, ವಾಕ್ಯಗಳ ಜೋಡಣೆ ಅತಿ ಅದ್ಭುತವಾಗಿ ಮೂಡಿಬಂದಿದೆ. ಪುರಂದರ ದಾಸರ ಅನ್ನಮಾಚಾರ್ಯರ ತೌಲನಿಕ ಅಧ್ಯಯನ ಗಮನಾರ್ಹವಾಗಿದೆ. ಅವರ ಕೃತಿಗಳ ವಿಶ್ಲೇಷಣೆ ಮನದಾಳಕ್ಕೆ ಇಳಿದು ಮೂಲ ಕೃತಿಗಳ ಅಧ್ಯಯನಕ್ಕೆ ಪ್ರೇರೇಪಿಸುವಂತಿದೆ. ಕೃತಿಯಲ್ಲಿ ಬಳಸಿರುವ ಚಿತ್ರಗಳು ಅಪೂರ್ವವಾಗಿದ್ದು, ಕೃತಿಯ ಅಂದವನ್ನು ಆಕರ್ಷಣೆಯನ್ನು ಅನ್ನಮಾಚಾರ್ಯರ ಬಗ್ಗೆ ಕನ್ನಡದಲ್ಲಿ ರಚಿತಗೊಂಡ ಅಪರೂಪದ ಕೃತಿ ಇದಾಗಿದೆ ಎನ್ನಬಹುದು.
ಶ್ರೀವಾರಿ ಫೌಂಡೇಶನ್ ಅಧ್ಯಕ್ಷ ಎಸ್.ವೆಂಕಟೇಶಮೂರ್ತಿ ರವರ ಸದ್ಭಕ್ತಿಯ ಪ್ರಕಾಶನ ಕನ್ನಡ ಧಾರ್ಮಿಕ ಸಾಹಿತ್ಯಕ್ಕೆ ಉತ್ತಮ ಕೊಡುಗೆಯಾಗಿದೆ. 64 ಪುಟಗಳ 30 ರೂ ಮೌಲ್ಯದ ಕಿರು ಕೈಪಿಡಿ ಪ್ರತಿಗಳಿಗೆ ಸಂಪರ್ಕಿಸಿ 9739369621
-ಡಾ ಸುಮನ ಬದ್ರಿನಾಥ್ (ಇಂದು ವಿಠಲ ದಾಸಿನಿ).