ಮೈಸೂರು: ಸೋಸಲೆ ವ್ಯಾಸರಾಜ ಮಠದ ವತಿಯಿಂದ ಆಯೋಜಿಸಿದ್ದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀಶ್ರೀಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದಂಗಳವರ ಶ್ರೀಮನ್ನ್ಯಾಯಸುಧಾ ಮಂಗಳ ಮಹೋತ್ಸವ ಹಾಗೂ ಶ್ರೀಗಳ ಸಹಸ್ರ ಚಂದ್ರದರ್ಶನ ಶಾಂತಿಯ ಶ್ರೀಶಾಭಿವಂದನೆ ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ವತಿಯಿಂದ ಶ್ರೀಶ್ರೀಶ್ರೀ ವಿದ್ಯಾಶ್ರೀಶ ತೀರ್ಥರಿಗೆ ಸಂಘಟನಾ ಕಾರ್ಯದರ್ಶಿ ಎನ್.ಎಸ್.ಸುಧೀಂದ್ರ ರಾವ್ ಮತ್ತು ಹಿರಿಯ ಸದಸ್ಯರಾದ ಶ್ರೀಪಾದರಾವ್ ಗೌರವ ಸಮರ್ಪಣೆ
ಸಲ್ಲಿದರು.
ಈ ಸಂದರ್ಭದಲ್ಲಿ ಮುಳಬಾಗಿಲು ಶ್ರೀಪಾದರಾಜ ಮಠದ ಪೀಠಾಧಿಪತಿ ಶ್ರೀಶ್ರೀಶ್ರೀ ಸುಜಯ ನಿಧಿ ತೀರ್ಥರು, ಬಾಳಿಗಾರು ಅಕ್ಷಯೋಭ್ಯ ಮಠದ ಕಿರಿಯ ಶ್ರೀಗಳಾದ ಶ್ರೀಶ್ರೀಶ್ರೀ ಅಕ್ಷಯೋಭ್ಯ ರಾಮಪ್ರಿಯತೀರ್ಥರು, ಎಸ್ ವಿ ಬಿ ಸಿ ಕನ್ನಡ ಚಾನೆಲ್ ನ ನಿರ್ದೇಶಕರಾದ ಡಾ.ಡಿ.ಪಿ.ಅನಂತ್ ಮುಂತಾದವರು ಉಪಸ್ಥಿತರಿದ್ದರು.