December 24, 2024

ವರದಿ: ಎಂ.ಆರ್.ದಖನಿ

ಹುಬ್ಬಳ್ಳಿ: ರಾಜ್ಯದ ಎರಡನೇ ಅತೀದೊಡ್ಡ ಮಹಾನಗರ ಪಾಲಿಕೆಯಿಂದ ಜನಸಾಮಾನ್ಯರಿಗೆ ಮತ್ತೊಂದು ಆಘಾತ ಎದುರಾಗಿದೆ. ಬಿಜೆಪಿ ಆಡಳಿತದಲ್ಲಿರುವ ಮಹಾನಗರ ಪಾಲಿಕೆಯ ಜನರಿಗೆ ಇದೀಗ ಟ್ಯಾಕ್ಸ್ ಬಿಸಿ ತಟ್ಟುತ್ತಿದೆ. ಕಳೆದ 20 ವರ್ಷಗಳಿಂದ ಬಿಜೆಪಿ ತೆಕ್ಕೆಯಲ್ಲಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ನಿರಂತರವಾಗಿ ಟ್ಯಾಕ್ಸ್ ಏರಿಕೆಯಾಗುತ್ತಲೆ ಇದೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಜನತೆಗೆ ಮಹಾನಗರ‌ ಪಾಲಿಕೆಯಿಂದ ಬಿಗ್ ಶಾಕ್ ಎದುರಾಗಿದೆ. ಕಟ್ಟಡ ಪರವಾನಗಿ ಸೇರಿದಂತೆ ಪಾಲಿಕೆಯ ಅತ್ಯವಶ್ಯಕ ಸವಲತ್ತುಗಳಿಗೆ ಸದ್ದಿಲ್ಲದೆ ತೆರಿಗೆಯನ್ನು ಹೆಚ್ಚಳ ಮಾಡಿದ್ದರಿಂದ ಅವಳಿನಗರದ ಜನಸಾಮಾನ್ಯರಿಗೆ ಮತ್ತಷ್ಟು ಹೊರೆ ಮಾಡಿದಂತಾಗಿದೆ. 10 % ರಿಂದ 25 % ರಷ್ಟು ಕಟ್ಟಡ ಪರವಾನಗಿ ಟ್ಯಾಕ್ಸ್ ಹೆಚ್ಚಳದ ನಿರ್ಧಾರದಿಂದ ಬಡ ವಿಭಾಗದ ಜನರಿಗೆ ಮತ್ತಷ್ಟು ಬಿಸಿತುಪ್ಪವಾಗಿ ಪರಿಣಮಿಣಿಸಿದೆ.
ಹೌದು, ಇಲ್ಲಿನ ಪಾಲಿಕೆಯ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿ ಪಕ್ಷದ ವಿರುದ್ಧ ಇದೀಗ ವಿರೋಧ ಸ್ಥಾನದಲ್ಲಿರುವ ಕೈ ಪಕ್ಷದ ಪಾಲಿಕೆ ಸದಸ್ಯರು ಅಸಮಾಧಾನಗೊಂಡಿದ್ದಾರೆ.

ಕಟ್ಟಡ ಪರವಾನಿಗೆ ಸೇರಿದಂತೆ ಅಭಿವೃದ್ದಿ‌ ಶುಲ್ಕದ ವಿಚಾರದಲ್ಲಿ ಏಕಾಏಕಿ‌ ಹೆಚ್ಚಳ ಮಾಡಲು ಮುಂದಾದ ಪಾಲಿಕೆ ಅಧಿಕಾರಿಗಳು ಹಾಗೂ ಆಡಳಿತ ಪಕ್ಷದ ವಿರುದ್ಧ ಆಕ್ರೋಶಗೊಂಡಿದ್ದಾರೆ.
ಡಾಂಬರೀಕರಣ, ನಿವೇಶನ ಕ್ಷೇತ್ರಕ್ಕೆ ಪ್ರತಿ ಚದರ ಮೀಟರ್ ಗೆ 126 ರೂ ಶುಲ್ಕ ಹಾಗೂ 10 % ರಷ್ಟು ಟ್ಯಾಕ್ಸ್ ಹೆಚ್ಚಳಕ್ಕೆ ನಿರ್ಧಾರ ಮಾಡಿದ್ದು, ವಸತಿ ಉದ್ದೇಶಿತ ಕಟ್ಟಡಗಳಿಗೆ ಡಾಂಬರೀಕರಣ ಅಭಿವೃದ್ದಿ ಶುಲ್ಕ 715 ರೂ‌ ಪ್ರತಿ ಚದರ ಮೀಟರ್ ಗೆ 10% ರಷ್ಟು ಏರಿಕೆ ಮಾಡಿದೆ. ವಾಣಿಜ್ಯ ಹಾಗೂ ಕೈಗಾರಿಕಾ ಉದ್ದೇಶಿತ ಕಟ್ಟಡಗಳಿಗೆ 780 ರೂಪಾಯಿ ಪ್ರತಿ ಚದರ ಮೀಟರ್ ಗೆ 20% ರಷ್ಟು ಹೊರೆಯಾಗಿದೆ. ವಸತಿ ನಿವೇಶನಗಳಿಗೆ 10% ರಷ್ಟು, ಕೈಗಾರಿಕೆ ಹಾಗೂ ವಾಣಿಜ್ಯ ಉದ್ಯಮದ‌ ನಿವೇಶನಗಳಿಗೆ 20% ರಷ್ಟು ಟ್ಯಾಕ್ಸ್ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ. ಈಗಿರುವ ಶುಲ್ಕಕ್ಕಿಂತ ಏಕಾಏಕಿ‌ ಶೇಕಡಾ 10 ರಿಂದ 25 ಪ್ರತಿಶತ ಶುಲ್ಕ‌ ಹೆಚ್ಚಳ ಮಾಡಲು ಸಿದ್ದತೆ ಮಾಡಿಕೊಂಡ ಪಾಲಿಕೆಯ ನಡೆಗೆ ಅವಳಿನಗರದ ಸಾರ್ವಜನಿಕ ವಿರೋಧಕ್ಕೆ ಕಾರಣವಾಗಿದೆ.


Leave a Reply

Your email address will not be published. Required fields are marked *