ಬೆಂಗಳೂರು: ಪರಿಸರವಾದಿ ಮತ್ತು ಪತ್ರಕರ್ತರಾದ ಪರಿಸರ ಮಂಜುರವರು ಪರಿಸರ ಸಂರಕ್ಷಣೆ ಕ್ಷೇತ್ರದಲ್ಲಿ ಮಾಡಿದ ಅನನ್ಯ ಸೇವೆಯನ್ನು ಪರಿಗಣಿಸಿ
ಅವರಿಗೆ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯಿಂದ ಜೂ.23 ರ ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ”ಯನ್ನು ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ
ಉಚ್ಚನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ.ಹೆಚ್.ಬಿ.ಪ್ರಭಾಕರ ಶಾಸ್ತ್ರಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಶಿ, ಚಲನಚಿತ್ರ ನಿರ್ದೇಶಕರಾದ ಎಸ್. ನಾರಾಯಣ್, ಡಾ.ಹೆಚ್.ಎಲ್.ಎನ್. ರಾವ್, ನಟಿ ಮೇಘಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಪರಿಸರ ಮಂಜು ರವರು
ಪ್ರಶಸ್ತಿ ಪಡೆದು ಮಾತನಾಡಿ ಪ್ರತಿಷ್ಠಿತ ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದ ಗಣ್ಯರಿಗೆ, ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯವರಿಗೆ, ಮಹದೇವಪುರ ಕ್ಷೇತ್ರದ ಮುಖಂಡರಿಗೆ ಹಾಗೂ ಮಿಡಿತ ಫೌಂಡೇಶನ್ ಸಂಸ್ಥೆಯ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು.