December 23, 2024

ಬೆಂಗಳೂರು: ಎನ್.ಯು ಆಸ್ಪತ್ರೆಯು 25 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಬೆಳ್ಳಿ ಹಬ್ಬದ ಸಂಭ್ರಮಾಚರಣೆಗೆ ನಗರದ ಪ್ರತಿಷ್ಠಿತ ಆಸ್ಪತ್ರೆಗಳ ನಡುವೆ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಯಶಸ್ವಿಯಾಗಿ ಪೂರ್ಣಗೊಂಡಿತು.
ಎರಡು ದಿನಗಳ ಕಾಲ ನಡೆದ ಈ ಪಂದ್ಯಾವಳಿಯು ಅನೇಕ ರೋಚಕ ಪಂದ್ಯಗಳಿಗೆ ಸಾಕ್ಷಿಯಾಯಿತು. ಭಾನುವಾರ ನಡೆದ ಅಂತಿಮ ಫೈನಲ್ ಪಂದ್ಯದಲ್ಲಿ ಸಂಘಟಿತ ಆಟ ಪ್ರದರ್ಶಿಸುವ ಮೂಲಕ ಪುಜಿತ್.ವೈ.ವಿ ನಾಯಕತ್ವದ ಮಜು಼ಮ್ ದಾರ್ ಶಾ ಮಲ್ಟಿಸ್ಪೆಷಾಲಿಟಿ ಸೆಂಟರ್ (ಎನ್.ಎಚ್.ಹೆಲ್ತ್) ತಂಡವು ಭರ್ಜರಿ ಜಯಭೇರಿ ಬಾರಿಸಿತು. ನಾರಾಯಣ ನೇತ್ರಾಲಯ ರಾಜಾಜಿನಗರ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ಎನ್.ಯು.ಆಸ್ಪತ್ರೆಯು 25 ವರ್ಷಗಳು ತುಂಬಿರುವ ಈ ವಿಶೇಷ ಕ್ಷಣವನ್ನು ಸ್ಮರಣೀಯವಾಗಿಸುವ ಹಿನ್ನೆಲೆಯಲ್ಲಿ ಸಾಲು, ಸಾಲು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರ ಹಿನ್ನೆಲೆಯಲ್ಲಿ ಈ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಎರಡು ದಿನಗಳ ಈ ಪಂದ್ಯಾವಳಿಯಲ್ಲಿ ನಗರದ 16 ಪ್ರತಿಷ್ಠಿತ ಆಸ್ಪತ್ರೆಗಳು ಭಾಗವಹಿಸಿದ್ದವು. ಬಿಐಪಿಎಸ್ ಮೈದಾನದಲ್ಲಿ ನಡೆದ ಪ್ರತಿ ಪಂದ್ಯಗಳು ಅತ್ಯಂತ ರೋಚಕ ಕ್ಷಣಗಳಿಗೆ ಸಾಕ್ಷಿಯಾದವು. ಆಸ್ಪತ್ರೆಯು ಪ್ರತಿ ಪಂದ್ಯಗಳನ್ನು ಯೂಟೂಬ್ ಮೂಲಕ ವೀಕ್ಷಿಸಲು ನೇರಪ್ರಸಾರದ ವ್ಯವಸ್ಥೆ ಮಾಡಿತ್ತು. ವೃತ್ತಿಪರ ಅಂಪೈರ್ ಹಾಗೂ ಸ್ಕೋರರ್ ಗಳನ್ನು ನೇಮಿಸಿಕೊಳ್ಳುವ ಮೂಲಕ ಪಂದ್ಯಗಳ ನಿಖರ ಫಲಿತಾಂಶ ಬರುವಂತೆ ಎಚ್ಚರಿಕೆ ವಹಿಸಲಾಗಿತ್ತು.ಎನ್.ಯು ಆಸ್ಪತ್ರೆಯು ಕಳೆದ 25 ವರ್ಷಗಳಿಂದ ನೆಫ್ರಾಲಜಿ, ಯೂರಾಲಜಿ ಹಾಗೂ ಫರ್ಟಿಲಿಟಿಯಲ್ಲಿ ಅತ್ಯುತ್ತಮ ದರ್ಜೆಯ ಆರೋಗ್ಯ ಸೇವೆಯನ್ನು ನೀಡುವ ಮೂಲಕ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿದೆ. ಈ ವಿಶೇಷ ಸಂದರ್ಭದ ಹಿನ್ನೆಲೆಯಲ್ಲಿ ಪಿಡಿಯಾಟ್ರಿಕ್ ಯೂರಾಲಜಿಯ ಹಿರಿಯ ವೈದ್ಯ ಹಾಗೂ ಎನ್.ಯು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್.ಎಂ.ಕೆ ಅವರು
ಮಾತನಾಡಿ ಆಸ್ಪತ್ರೆ ಆಯೋಜಿಸಿದ್ದ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೆ ಧನ್ಯವಾದಗಳನ್ನು ತಿಳಿಸಿದರು. ಪ್ರತಿ ವರ್ಷ ಜೂನ್ ತಿಂಗಳಿನಲ್ಲಿ ಎನ್.ಯು. ಆಸ್ಪತ್ರೆಯು ಈ ರೀತಿಯ ಪಂದ್ಯಾವಳಿಯನ್ನು ಆಯೋಜಿಸಲು ಯೋಚಿಸಿದೆ ಎಂದು ತಿಳಿಸಿದರು.


Leave a Reply

Your email address will not be published. Required fields are marked *