ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಸಂಗೀತ ಶಿಕ್ಷಣದ ಪ್ಲಾಟ್ ಫಾರಂ ಮ್ಯೂಜಿಗಲ್ ಜಕ್ಕೂರು ಲೇಔಟಿನ ಅಮೃತಹಳ್ಳಿಯಲ್ಲಿ ತನ್ನ 11ನೇ ಅತ್ಯಾಧುನಿಕ ಮ್ಯೂಸಿಕ್ ಅಕಾಡೆಮಿ ಪ್ರಾರಂಭಿಸಿದೆ.
ಮ್ಯೂಜಿಗಲ್ ಸಂಸ್ಥಾಪಕ ಡಾ.ಲಕ್ಷ್ಮೀನಾರಾಯಣ ಯೆಲೂರಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮ್ಯೂಜಿಗಲ್ ಅಕಾಡೆಮಿಯು ಸಂಗೀತ ಶಿಕ್ಷಣವನ್ನು ಅತ್ಯಾಧುನಿಕ ಕಲಿಕಾ ಕೇಂದ್ರದ ಮೂಲಕ ಪ್ರಜಾಸತ್ತೀಯಗೊಳಿಸುವ ಉದ್ದೇಶ ಹೊಂದಿದೆ. ಇದು ಸಂಗೀತದಲ್ಲಿ ಅತ್ಯುತ್ತಮ ಕಲಿಕೆ ಮತ್ತು ಬೋಧನೆಯ ಅನುಭವ ನೀಡುತ್ತದೆ. ಇದು ಪರಿಣಿತ ಶಿಕ್ಷಕರಿಂದ ಭಾರತೀಯ ಶಾಸ್ತ್ರೀಯ ಮತ್ತು ಪಾಶ್ಚಿಮಾತ್ಯ ಸಂಗೀತದಲ್ಲಿ ಕಲಿಕೆ ಮತ್ತು ಬೋಧನೆ ನೀಡುತ್ತದೆ. ಇದರೊಂದಿಗೆ ರಚನಾತ್ಮಕ ಪಠ್ಯಕ್ರಮ, ನಿಯಮಿತ ಮೌಲ್ಯಮಾಪನ, ಪ್ರಮಾಣೀಕರಣ, ಅನುಕೂಲಕರ ಶುಲ್ಕ ಪಾವತಿ, ತರಬೇತಿ ಪಡೆದ ಶಿಕ್ಷಕರು ಮತ್ತು ಸುಲಭ ಲಭ್ಯತೆ ಇದನ್ನು ಕಲಿಯುವವರ ಕೇಂದ್ರವಾಗಿಸಿದೆ ಎಂದರು. ಖ್ಯಾತ ಹಿನ್ನೆಲೆ ಗಾಯಕ ನಾಗರಂಜನಿ ರಘು ಮುಖ್ಯ ಅತಿಥಿಯಾಗಿದ್ದರು.
500 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಹಲವು ಬ್ಯಾಚ್ ಗಳನ್ನು ಹೊಂದಿರುವ ಈ ಮ್ಯೂಸಿಕ್ ಅಕಾಡೆಮಿಯು ಪಿಯಾನೊ, ಕೀಬೋರ್ಡ್, ಗಿಟಾರ್, ಡ್ರಮ್ಸ್, ಕರ್ನಾಟಕ ಸಂಗೀತ, ಹಿಂದೂಸ್ಥಾನಿ, ಪಾಶ್ಚಿಮಾತ್ಯ, ವಯೊಲಿನ್ ಮತ್ತು ಉಕುಲೆಲೆಯಲ್ಲಿ ಪಾಠಗಳನ್ನು ನೀಡುತ್ತದೆ. ಉದ್ಘಾಟನಾ ತಿಂಗಳಲ್ಲಿ ಮ್ಯೂಜಿಗಲ್ ನೋಂದಾಯಿತರಾದ ಎಲ್ಲರಿಗೂ 1 ತಿಂಗಳು ಉಚಿತ ಸಂಗೀತ ಶಿಕ್ಷಣ ನೀಡುತ್ತದೆ.
ಮ್ಯೂಜಿಗಲ್ ಸಂಗೀತ ಶಿಕ್ಷಣದಲ್ಲಿ 360-ಡಿಗ್ರಿ ಫ್ರೇಮ್ ವರ್ಕ್ ಅನ್ನು ಪೂರೈಸುತ್ತಿದ್ದು ಸಂಗೀತ ಕಲಿಕೆ ಮತ್ತು ಬೋಧನೆಯ ವ್ಯವಸ್ಥೆಯನ್ನು ಆನ್ ಲೈನ್, ಆಫ್ ಲೈನ್ ಮತ್ತು ಸಂಗೀತ ಸಾಧನಗಳ ಮಳಿಗೆಯನ್ನು ಒಂದೇ ಪ್ಲಾಟ್ ಫಾರಂಗೆ ಅಳವಡಿಸುವ ಮೂಲಕ ಸುವರ್ಣ ಮಾನದಂಡ ರೂಪಿಸುತ್ತಿದೆ.
ಭಾರತ, ಯು.ಎಸ್.ಎ., ಯು.ಕೆ., ಆಸ್ಟ್ರೇಲಿಯಾ ಮತ್ತು ಯು.ಎ.ಇ.ಗಳಲ್ಲಿ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ 400+ ತರಬೇತಿ ಪಡೆದ ಸಂಗೀತ ಶಿಕ್ಷಕರನ್ನು ಹೊಂದಿದ್ದು 40,000ಕ್ಕೂ ಹೆಚ್ಚು ತರಗತಿಗಳನ್ನು ಯಶಸ್ವಿಯಾಗಿ ಪೂರೈಸಿರುವ ಮ್ಯೂಜಿಗಲ್ ವಿದ್ಯಾರ್ಥಿಗಳಿಗೆ ಅವರ ಸಂಗೀತದ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ನೆರವಾಗುತ್ತದೆ.
ವಿಳಾಸ:
ಮ್ಯೂಜಿಗಲ್ ಅಕಾಡೆಮಿ ,ನಂ.158, 1ನೇ ಮಹಡಿ, ಮಾಮ್ ದೇವ್ ಮ್ಯಾನ್ಷನ್, ಅಮೃತಹಳ್ಳಿ ಮುಖ್ಯರಸ್ತೆ, ಬೆಂಗಳೂರು, ಕರ್ನಾಟಕ-560092