ಅರಸೀಕೆರೆ: ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ
ನಗರದ ಶ್ರೀಆದಿಚುಂಚನಗಿರಿ ಆಂಗ್ಲ ಶಾಲೆ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾದರು.
ಬಾಲಕಿಯರ ವಿಭಾಗದಲ್ಲಿ
4X400 ರಿಲೇ – ಪ್ರಥಮ , ಥ್ರೋ ಬಾಲ್ – ಪ್ರಥಮ, 400 ಮೀ – ದ್ವಿತೀಯ, 600 ಮೀ – ದ್ವಿತೀಯ ಮತ್ತು ಗುಂಡು ಎಸೆತದಲ್ಲಿ ತೃತಿಯ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
ಬಾಲಕರ ವಿಭಾಗದಲ್ಲಿ
100 ಮೀ – ಪ್ರಥಮ , 400 ಮೀ – ಪ್ರಥಮ ಹಾಗೂ ದ್ವಿತೀಯ, 3. 600 ಮೀ – ಪ್ರಥಮ ಹಾಗೂ ದ್ವಿತೀಯ, ಉದ್ದ ಜಿಗಿತ – ಪ್ರಥಮ, 4X100 ರಿಲೇ – ಪ್ರಥಮ, 4X400 ರಿಲೇ – ಪ್ರಥಮ, ಥ್ರೋ ಬಾಲ್ – ಪ್ರಥಮದೊಂದಿಗೆ ಬಾಲಕರ ವೈಯುಕ್ತಿಕ ಚಾಂಪಿಯನ್ ಶಿಪ್ ಹಾಗೂ ಬಾಲಕರ ಸಮಗ್ರ ಚಾಂಪಿಯನ್ ಶಿಪ್ ತಮ್ಮದಾಗಿಸಿಕೊಂಡು ತಾಲ್ಲೂಕು ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.
ಕ್ರೀಡೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಆದಿಚುಂಚನಗಿರಿ ಶ್ರೀಮಠದ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಸ್ವಾಮಿಜಿ, ಹಾಸನ ಶಾಖಾಮಠದ ಶ್ರೀಶ್ರೀಶ್ರೀ ಶಂಭುನಾಥ ಸ್ವಾಮಿಜಿ, ಮುಖ್ಯೋಪಾಧ್ಯಾಯಿನಿ ಜ್ಞಾನೇಶ್ವರಿ, ದೈಹಿಕ ಶಿಕ್ಷಕರಾದ ಸ್ವಾತಿ, ರವಿ ಸೇರಿದಂತೆ ಬೋಧಕ ವೃಂದವು ಶ್ಲಾಘಿಸಿದೆ.