ಬೆಂಗಳೂರು: ಅಧಿಕಾರಿಗಳಿಗೆ ಸಿಗಬೇಕಾದ ಮುಂಬಡ್ತಿ ಸಿಕ್ತಿಲ್ಲ ಮತ್ತು ಮೇಲಧಿಕಾರಿಗಳ ಕಿರುಕುಳ ತಪ್ಪಿಲ್ಲ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಎಂ.ಅಮೃತ್ ರಾಜ್ ಹೇಳಿದರು.
ಬಿಬಿಎಂಪಿ ಕೇಂದ್ರ ಕಛೇರಿಯ ಡಾ.ರಾಜ್ ಕುಮಾರ್ ಗಾಜಿನಮನೆ ಅವರಣದಲ್ಲಿ ನಡೆದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.ಬೆಂಗಳೂರುನಗರದಲ್ಲಿ 1.30 ಕೋಟಿ ಜನ ವಾಸವಿದ್ದಾರೆ. ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕೊರತೆ ಇದ್ದರೂ, ನಗರದ ಜನತೆಗೆ ಸೂಕ್ತ ಮೂಲಭೂತ ಸೌಲಭ್ಯ ಒದಗಿಸಲು ಅಧಿಕಾರಿಗಳು ಶ್ರಮ ವಹಿಸುತ್ತಿದ್ದಾರೆ. ಅದರೂ ಅವರಿಗೆ ಸಿಗಬೇಕಾದ ಮುಂಬಡ್ತಿ ಮತ್ತು ಮೇಲಧಿಕಾರಿಗಳ ಕಿರುಕುಳ ತಪ್ಪಿಲ್ಲ. ಲೋಕಪಯೋಗಿ ಇಲಾಖೆಯಿಂದ ಎರವಲು ಸೇವೆ ಇಂಜನಿಯರ್ ಗಳ ನೇಮಕ ಮಾಡಬೇಕು. ಅದರೆ ವಿವಿಧ ಇಲಾಖೆಗಳಿಂದ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಇದು ಕೆ.ಎಂ.ಸಿ.ಕಾನೂನಿನ ವಿರುದ್ದವಾಗಿದೆ.
ಬಿಬಿಎಂಪಿಯಲ್ಲಿ ಉತ್ತಮ ಇಂಜನಿಯರ್ ಗಳು ಇದ್ದಾರೆ. ಅವರಿಗೆ ಬಡ್ತಿ ನೀಡಿ ನೇಮಕ ಮಾಡಿಕೊಳ್ಳಬಹುದು. ಅವಶ್ಯಕತೆ ಇದ್ದಲ್ಲಿ ಲೋಕೋಪಯೋಗಿ ಇಲಾಖೆ ಎರವಲು ಸೇವೆ ಪಡೆದುಕೊಳ್ಳಬಹುದು.
ಎಸಿ.ಎಸ್ಟೇಟ್ ಮೇಲಾಧಿಕಾರಿ ಶ್ರೀನಿವಾಸಮೂರ್ತಿರವರು ಮಹಿಳೆ ಸಿಬ್ಬಂದಿಗಳಿಗೆ ಅವಾಚ್ಯ ಶಬ್ಬ ಬಳಸಿ ಮಾತನಾಡುತ್ತಾರೆ. ಇಂತಹ ಬಿಬಿಎಂಪಿ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳಬೇಕು.ಬಿಬಿಎಂಪಿಯಲ್ಲಿ ಸಬ್ ರಿಜಿಸ್ಟ್ರಾರ್ ಹುದ್ದೆಯಲ್ಲಿ ನೇಮಕಗೊಂಡು, ಸಬ್ ರಿಜ್ಜಿಸ್ಟಾರ್ ಆಗಿ ನಿವೃತ್ತಿ ಹೊಂದುತ್ತಾರೆ ಅವರಿಗೂ ಸಹ ಬಡ್ತಿ ಸಿಗಬೇಕು. “ಎ”ಶ್ರೇಣೆ ಅಧಿಕಾರಿ ನೇಮಕಾತಿ ಅಧಿಕಾರವನ್ನು ಮುಖ್ಯ ಆಯುಕ್ತರಿಗೆ ನೀಡಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಸಾಯಿಶಂಕರ್, ಎ.ಜಿ.ಬಾಬಣ್ಣ, ಕೆ.ಜಿ.ರವಿ, ಡಾ.ಶೋಭಾ, ಹೆಚ್.ಕೆ.ಹರೀಶ್, ಸೋಮಶೇಖರ್, ಆರ್.ರೇಣುಕಾಂಬ, ಡಿ.ರಾಮಚಂದ್ರ, ಕೆ.ಮಂಜೇಗೌಡ, ಎಸ್.ಜಿ.ಸುರೇಶ್,
ಶ್ರೀಧರ್.ಎನ್, ಸಂತೋಷ್ ಕುಮಾರ್, ಎನ್.ಮಂಜುನಾಥ್, ಕೆ.ನರಸಿಂಹ, ಕೆ.ಸಂತೋಷ್ ಕುಮಾರ್ ನಾಯ್ಕ್, ವಿ.ಉಮೇಶ್, ಹೆಚ್.ಕೆ.ತಿಪ್ಪೇಶ್ ಮುಂತಾದವರು ಉಪಸ್ಥಿತರಿದ್ದರು.ಅಧಿಕಾರಿ ಮತ್ತು ನೌಕರರ ಕುಂದು ಕೊರತೆಗಳನ್ನು ಚರ್ಚಿಸಲು ಅಧ್ಯಕ್ಷರಾದ ಎ.ಅಮೃತ್ ರಾಜ್ ರವರ ನೇತೃತ್ವದಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಆರು ಅಂಶಗಳ ಕುರಿತು ಸಭೆಯಲ್ಲಿ ಅಧಿಕಾರಿ ಮತ್ತು ನೌಕರರು ಸಭೆ ನಡೆಸಿದರು.
ಎರವಲು ಸೇವೆ ಅಧಿಕಾರಿ, ಎಂಜನಿಯರ್ ಗಳ ಸೇವೆಗೆ ಕಡಿವಾಣ ಹಾಕಿ, ಮೇಲಾಧಿಕಾರಿಗಳ ಕಿರುಕುಳ ತಪ್ಪಿಸಿ, ಸಕಾಲಕ್ಕೆ ಬಡ್ತಿ ನೀಡಿ ಎಂದು ಮುಖ್ಯ ಆಯುಕ್ತರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಯಿತು.ಮುಖ್ಯವಾಗಿ ಚರ್ಚಿಸಿದ
ಆರು ಅಂಶಗಳು:
1)ಮುಂಬಡ್ತಿ:- ವ್ಯವಸ್ಥಾಪಕರ ಹುದ್ದೆ, ಕಂದಾಯ ಪರಿವೀಕ್ಷಕರ ಹುದ್ದೆ, ಹಿರಿಯ ಮಹಿಳಾ ಸಹಾಯಕಿಯರ ಹುದ್ದೆ, ಇತರೆ ಹುದ್ದೆ ಮುಂಬಡ್ತಿಗಳ ಬಗ್ಗೆ
2)ಹುದ್ದೆ ಬದಲಾವಣೆ:- ಉಪನೋಂದಣೆಗಾರರ ಹುದ್ದೆ
3) ಶೇ.25% ನೇರನೇಮಕಾತಿ ಹುದ್ದೆಯನ್ನು ಕಂದಾಯ ಪರಿವೀಕ್ಷಕರ ಹುದ್ದೆಗೆ ಮೀಸಲಿಟ್ಟಿರುವ ಬಗ್ಗೆ,
4) ನೌಕರರ ವಿರೋಧಿ ಅಧಿಕಾರಿಗಳ ವಿರುದ್ಧ ಕ್ರಮದ ಬಗ್ಗೆ
5)”ಎ” ಶ್ರೇಣೆ ಅಧಿಕಾರಿಗಳ ನೇಮಕಾತಿ ಪ್ರಾಧಿಕಾರ ಮಾನ್ಯ ಮುಖ್ಯ ಆಯುಕ್ತರಿಗೆ ನೀಡುವ ಬಗ್ಗೆ
6) ಎರವಲು ಸೇವೆ ನೌಕರರ ಬಗ್ಗೆ ಚರ್ಚಿಸಲಾಯಿತು.