December 24, 2024

ಬೆಂಗಳೂರು: ಭಾರತದ ಮೊದಲ ಮತ್ತು ಅತ್ಯಂತ ಹಳೆಯ ಕರದಂಟು ಉತ್ಪಾದಕರಾದ ಅಮೀನಗಢದ ವಿಜಯ್ ಕರದಂಟು ಬೆಂಗಳೂರಿನಲ್ಲಿ ತನ್ನ ನಾಲ್ಕನೇ ಮಳಿಗೆ ಮತ್ತು ಕರ್ನಾಟಕದಲ್ಲಿ 25ನೇ ಮಳಿಗೆಯನ್ನು ಪ್ರಾರಂಭಿಸಿದೆ.
ಮಾಜಿ ಸಚಿವರು ಹಾಗೂ ಮಹಾಲಕ್ಷ್ಮೀ ಲೇಔಟ್ ಶಾಸಕರಾದ ಗೋಪಾಲಯ್ಯ ಮತ್ತು ತೇಜು ಮಸಾಲಾದ ಮಸಾಲಾ ಜಯರಾಂ ಉದ್ಘಾಟಿಸಿದರು.

ವಿಜಯ್ ಕರದಂಟು ಮಾಲೀಕ ಸಂತೋಷ್ ಐಹೊಳ್ಳಿ ಮಾತನಾಡಿ, ಬಸವೇಶ್ವರನಗರದಲ್ಲಿ ನಮ್ಮ ಹೊಸ ಮಳಿಗೆಯನ್ನು ಪ್ರಾರಂಭಿಸುವ ಮೂಲಕ ಬೆಂಗಳೂರಿನಲ್ಲಿ ನಮ್ಮ ವ್ಯಾಪ್ತಿ ವಿಸ್ತರಿಸಲು ಬಹಳ ಸಂತೋಷ ಹೊಂದಿದ್ದೇವೆ. ಸಾಂಪ್ರದಾಯಿಕ ಪಾಕವಿಧಾನ ಕಾಪಾಡಿಕೊಳ್ಳುವ ನಮ್ಮ ಬದ್ಧತೆ ಮತ್ತು ಉನ್ನತ ಗುಣಮಟ್ಟ, ಆರೋಗ್ಯಕರ ಉತ್ಪನ್ನಗಳ ಬಳಕೆಯು ನಮ್ಮ ಪ್ರಥಮ ಆದ್ಯತೆಯಾಗಿದೆ. ನಾವು ನಮ್ಮ ಗ್ರಾಹಕರ ಬೆಂಬಲಕ್ಕೆ ಆಭಾರಿಯಾಗಿದ್ದೇವೆ. ನಮ್ಮ ವಿಶ್ವಾಸಾರ್ಹ ಕರದಂಟು ಮೂಲಕ ಸಮುದಾಯಕ್ಕೆ ಸೇವೆ ಒದಗಿಸಲು ಎದುರು ನೋಡುತ್ತಿದ್ದೇವೆ ಎಂದರು.
ಅಮೀನಗಢ ವಿಜಯ್ ಕರದಂಟು ತನ್ನ ಸಿಹಿ ತಿನಿಸಿಗೆ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯಿಂದ ತನ್ನ ಪ್ರತಿಷ್ಠೆಯನ್ನು ಬೆಳೆಸಿಕೊಂಡಿದೆ. ಕರದಂಟಿನ ಪ್ರತಿ ತುಣುಕೂ ಅತ್ಯಂತ ಎಚ್ಚರಿಕೆಯಿಂದ ತಯಾರಿಸಲಾಗಿದ್ದು, ಪ್ರತಿ ಬಾರಿ ಸೇವಿಸಿದಾಗಲೂ ಅದರ ಶ್ರೀಮಂತ ಪರಂಪರೆಯ ಸಾಕ್ಷಿಯಾಗಿರುತ್ತದೆ. ಬಸವೇಶ್ವರನಗರದ ಹೊಸ ಮಳಿಗೆಯು ಈ ಪ್ರದೇಶದ ಸಿಹಿಪ್ರಿಯರಿಗೆ ಆದ್ಯತೆಯ ತಾಣವಾಗಿದ್ದು, ಕಾಲನ ಪರೀಕ್ಷೆಯಲ್ಲಿ ದಾಟಿ ಬಂದ ಪ್ರೀತಿಪಾತ್ರ ರುಚಿ ಉಳಿಸಿಕೊಂಡಿದೆ ಎಂದರು.

ಅಮೀನಗಢದ ವಿಜಯ್ ಕರದಂಟು ಕುರಿತು:
1907ರಲ್ಲಿ ಪ್ರಾರಂಭವಾದ ಅಮೀನಗಢ ವಿಜಯ್ ಕರದಂಟು ಭಾರತದ ಮೊದಲ ಸಾಂಪ್ರದಾಯಿಕ ಕರದಂಟು ತಯಾರಕರು. ತನ್ನ ಅತ್ಯುತ್ತಮ ಮತ್ತು ಆರೋಗ್ಯಕರ ಉತ್ಪನ್ನಗಳ ಬಳಕೆ ಮತ್ತು ಸಾಂಪ್ರದಾಯಿಕ ವಿಧಾನಗಳಿಗೆ ಬದ್ಧತೆಯಿಂದ ಈ ಬ್ರಾಂಡ್ ಕರ್ನಾಟಕದಾದ್ಯಂತ 25 ಮಳಿಗೆಗಳನ್ನು ಹೊಂದಿದೆ ಎಂದು‌ ತಿಳಿಸಿದರು.


Leave a Reply

Your email address will not be published. Required fields are marked *