ಅರಸೀಕೆರೆ: ನಗರದ ಸರಸ್ವತಿಪುರಂ ಮತ್ತು ಇಂದಿರಾ ನಗರ ಬಡಾವಣೆಗಳಲ್ಲಿರುವ ಕೊಳಚೆ ಪ್ರದೇಶಗಳ ಖಾಯಂ ನಿವಾಸಿಗಳ ಮನೆ ನಿರ್ಮಾಣ ಮತ್ತು ಯಾದಪುರ ರಸ್ತೆಯ ಹೌಸಿಂಗ್ ಫಾರ್ ಆಲ್ ಯೋಜನೆಯ ಮನೆ ನಿರ್ಮಾಣ ವಿಳಂಬ ಬಗ್ಗೆ ಸಾರ್ವಜನಿಕರ ಆರೋಪಗಳ ಹಿನ್ನೆಲೆಯಲ್ಲಿ ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ರವರ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಇಂದು ಪ್ರವಾಸಿ ಮಂದಿರ ಸಭಾಂಗಣದಲ್ಲಿ ನಡೆಯಿತು. ಇಂದಿರಾನಗರ ಬಡಾವಣೆ ನಿವಾಸಿಗಳ ಸಮಸ್ಯೆಗಳನ್ನು ಅವಲೋಕಿಸಿದ ಶಾಸಕರು ಸ್ಲಂ ಬೋರ್ಡ್ ವತಿಯಿಂದ ಮನೆ ನಿರ್ಮಾಣ ಆಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಕೆ.ಎಂ ಶಮೀವುಲ್ಲಾ, ಕಾಂತೇಶ್, ವೆಂಕಟಮುನಿ, ಜಿ.ಟಿ.ಗಣೇಶ್, ರಾಜಶೇಖರ್, ಹಾಸನ ಸ್ಲಂ ಬೋರ್ಡ್ ಅಧಿಕಾರಿಗಳಾದ ಮಹದೇವ್, ಮನೋಹರ್, ಅಭಿಯಂತರ ಜೋಸ್ನಾ, ಶ್ರೀನಿವಾಸ್, ನಗರಸಭೆ ಪೌರಾಯುಕ್ತ ಕೃಷ್ಣಮೂರ್ತಿ, ಅಭಿಯಂತರರಾದ ನಾಗೇಂದ್ರ, ಜಗದೀಶ್, ಸುನೀಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.