December 24, 2024

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಬೆಂಗಳೂರು ನಗರ ಮತ್ತು ಅದಕ್ಕೆ ಸುತ್ತಮುತ್ತಲಿನ ಉಪನಗರ ಹಾಗೂ ಗ್ರಾಮಗಳಿಂದ ನಗರದೊಳಗೆ ನಿರಂತರ ಸಾರಿಗೆ ಸೌಲಭ್ಯ ಒದಗಿಸಲು 49 ಘಟಕಗಳು, 10 ಟಿಟಿಎಂಸಿ, ಮೂರು ಪ್ರಮುಖ ಬಸ್ ನಿಲ್ದಾಣಗಳು (ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್.ಮಾರುಕಟ್ಟೆ, ಶಿವಾಜಿನಗರ ಬಸ್ ನಿಲ್ದಾಣ) ಮತ್ತು 4 ಕಾರ್ಯಾಗಾರಗಳನ್ನು ಸ್ಥಾಪಿಸಿದೆ.ಬೆಂಗಳೂರು ನಗರದಲ್ಲಿ ಡೆಂಗಿ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡೆಂಗಿ ನಿಯಂತ್ರಣಕ್ಕೆ ವಿವಿಧ ಮಾರ್ಗದರ್ಶನಗಳನ್ನು ನೀಡಿದೆ. ಈ ಮಾರ್ಗದರ್ಶನಗಳ ಆಧಾರದ ಮೇಲೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ತನ್ನ ಎಲ್ಲಾ ಘಟಕಗಳು, ಟಿಟಿಎಂಸಿಗಳು ಮತ್ತು ಪ್ರಮುಖ ಬಸ್ ನಿಲ್ದಾಣಗಳಲ್ಲಿ ನೀರು ನಿಲ್ಲದಂತೆ ಸ್ವಚ್ಚತಾ ಕ್ರಮಗಳನ್ನು ಕೈಗೊಳ್ಳಲು ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್. ಆರ್., (ಭಾ.ಆ.ಸೇ.) ಅವರು, ಎಲ್ಲಾ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ, ಘಟಕ ವ್ಯವಸ್ಥಾಪಕರುಗಳಿಗೆ, ನಿಲ್ದಾಣಾಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.ಇದರೊಂದಿಗೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಯೋಗದೊಂದಿಗೆ, ಎಲ್ಲಾ ಸ್ಥಳಗಳಲ್ಲಿ ಲಾರ್ವಿಸೈಡ್ ಗಳನ್ನು ಸಿಂಪಡಿಸಲಾಗುತ್ತಿದೆ.ಡೆಂಗಿ ಹೋಗಲಾಡಿಸಲು ಸಿಬ್ಬಂದಿಗಳು ಕೈಗೊಂಡ ಕ್ರಮಗಳು:
1.ಘಟಕಗಳಲ್ಲಿ ಬಳಸಿದ ಟೈರುಗಳಲ್ಲಿ ನೀರು ಶೇಖರಿಸಿದಂತೆ ಎಚ್ಚರಿಕೆ.
2.ನೀರು ಶೇಖರಿಸುವ ಸಿಮೆಂಟ್ ತೊಟ್ಟಿ, ಡ್ರಮ್, ಬ್ಯಾರೆಲ್ ಗಳ ಮೇಲೆ ಮುಚ್ಚಳಗಳನ್ನು ಮುಚ್ಚಲು ಕ್ರಮ.
3.ಘಟಕಗಳಲ್ಲಿ ಶೇಖರಣೆಯಾಗುವ ಘನತ್ಯಾಜಗಳಲ್ಲಿ ನೀರು ನಿಲ್ಲದಂತೆ ಕ್ರಮ ಹಾಗೂ ವಿಲೇವಾರಿ ಮಾಡುವುದು.
4.ಹೂವಿನ ಹೂದಾನಿಗಳಲ್ಲಿ ನೀರು ಶೇಖರಿಸದಂತೆ ಎಚ್ಚರಿಕೆ.
5.ಕಟ್ಟಡದ ಮೆಟ್ಟಿಲುಗಳು ಮತ್ತು ಮೇಲ್ಚಾವಣಿಯ ಮೇಲೆ ನೀರು ನಿಲ್ಲದಂತೆ ಎಚ್ಚರಿಕೆ.
ಈ ಎಲ್ಲಾ ಕ್ರಮಗಳು ಸೊಳ್ಳೆಗಳ ಸಂಖ್ಯೆಯನ್ನು ನಿಯಂತ್ರಿಸಿ, ಡೆಂಗಿ ಜ್ವರ ಹರಡುವುದನ್ನು ತಡೆಯಲು ಸಹಾಯಮಾಡುತ್ತವೆ. ಸಂಸ್ಥೆಯು ಈ ಕ್ರಮಗಳನ್ನು ಸಂಪೂರ್ಣವಾಗಿ ಪಾಲಿಸುತ್ತಿದೆ ಮತ್ತು ಕೈಗೊಳ್ಳುತ್ತಿದೆ.ಪ್ರಯಾಣಿಕರ ಮತ್ತು ಸಿಬ್ಬಂದಿಗಳ ಹಿತರಕ್ಷಣೆಯೇ ಬಿಎಂಟಿಸಿಯ ಮೊದಲ ಆದ್ಯತೆ.


Leave a Reply

Your email address will not be published. Required fields are marked *