ಮುಂಬೈ: ಕನಸುಗಳ ಶಕ್ತಿ, ಕಠಿಣ ಪರಿಶ್ರಮಕ್ಕೆ ಜ್ಯೋತಿ ಅದ್ಭುತ ಸಾಧನೆಯ ಸಾಕ್ಷಿಯಾಗಿದ್ದಾರೆ ಎಂದು ರಿಲಯನ್ಸ್ ಫೌಂಡೇಶನ್‌ನ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಶ್ರೀಮತಿ ನೀತಾ ಎಂ.ಅಂಬಾನಿ ಹೇಳಿದರು. ಭಾರತದ ಅತಿವೇಗದ ಹರ್ಡಲರ್ ಜ್ಯೋತಿ ಯರ್ರಾಜಿ ಅವರು ಮುಂಬರುವ 2024ರ ಪ್ಯಾರಿಸ್ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಬಗ್ಗೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ರಿಲಯನ್ಸ್ ಫೌಂಡೇಶನ್‌ನ ಬೆಂಬಲದೊಂದಿಗೆ ಜ್ಯೋತಿ ಅವರು ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 100 ಮೀಟರ್ ಹರ್ಡಲ್ಸ್‌ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಮಹಿಳೆ ಎನಿಸಲಿದ್ದಾರೆ. ಮಹಿಳೆಯರ 100 ಮೀಟರ್ ಹರ್ಡಲ್ಸ್ ಸ್ಪರ್ಧೆ 1972ರಿಂದ ಪ್ರತಿ ಒಲಿಂಪಿಕ್ಸ್‌ನ ಭಾಗವಾಗಿದೆ. ಆದರೆ ಇದೇ ಮೊದಲ ಬಾರಿಗೆ ಭಾರತೀಯ ಅಥ್ಲೀಟ್ ಒಬ್ಬರು ಈ ಓಟದ ಆರಂಭಿಕ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಮ್ಮ ರಿಲಯನ್ಸ್ ಫೌಂಡೇಶನ್ ಅಥ್ಲೀಟ್ ಜ್ಯೋತಿ ಯರ್ರಾಜಿ ಅವರು ಒಲಿಂಪಿಕ್ಸ್ ನಲ್ಲಿ ಮಹಿಳೆಯರ 100 ಮೀಟರ್ ಹರ್ಡಲ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದು ನಮಗೆ ಅಪಾರ ಸಂತೋಷ ಮತ್ತು ಅಗಾಧ ಗೌರವ ತಂದಿದೆ. ಆಕೆಯ ಸಮರ್ಪಣೆ ಮತ್ತು ಈ ಅದ್ಭುತ ಸಾಧನೆಯು ಕನಸುಗಳ ಶಕ್ತಿ ಮತ್ತು ಅವಿರತ ಪರಿಶ್ರಮಕ್ಕೆ ಸಾಕ್ಷಿಯಾಗಿದೆ. ಅವರು ಭಾರತದ ಯುವಕರ ಸ್ಫೂರ್ತಿ, ಪ್ರತಿಭೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಸಾಕಾರಗೊಳಿಸಿದ್ದಾರೆ ಎಂದು ಹೇಳಿದರು.ರಿಲಯನ್ಸ್ ಫೌಂಡೇಶನ್‌ನಲ್ಲಿ ಜ್ಯೋತಿ ಮತ್ತು ನಮ್ಮ ಎಲ್ಲಾ ಯುವ ಕ್ರೀಡಾಪಟುಗಳನ್ನು ನಾವು ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಬೆಂಬಲಿಸಲು ಬದ್ಧರಾಗಿದ್ದೇವೆ. ಪ್ಯಾರಿಸ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಜ್ಯೋತಿ ಮತ್ತು ಇಡೀ ಭಾರತೀಯ ತಂಡಕ್ಕೆ ನಾವು ಶುಭ ಹಾರೈಸುತ್ತೇವೆ. ಅವರು ಜಾಗತಿಕ ವೇದಿಕೆಯಲ್ಲಿ 140 ಕೋಟಿ ಭಾರತೀಯರ ಕನಸುಗಳು, ಭರವಸೆಗಳು ಮತ್ತು ಪ್ರಾರ್ಥನೆಗಳನ್ನು ಪ್ರತಿನಿಧಿಸುವುದರಿಂದ ಅವರು ತ್ರಿವರ್ಣ ಧ್ವಜವನ್ನು ಇನ್ನಷ್ಟು ಎತ್ತರಕ್ಕೆ ಏರಿಸುವಂತಾಗಲಿ ಎಂದು ಶ್ರೀಮತಿ ನೀತಾ ಎಂ. ಅಂಬಾನಿ ಹೇಳಿದರು.
ಮಹಿಳೆಯರ 100 ಮೀಟರ್ ಹರ್ಡಲ್ಸ್ ನಲ್ಲಿ ಹಾಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿರುವ ಜ್ಯೋತಿ ಯರ್ರಾಜಿ ಅವರು, ಏಷ್ಯನ್ ಗೇಮ್ಸ್ ನ ಈ ಸ್ಪರ್ಧೆಯಲ್ಲಿ ಪದಕ ಗೆದ್ದುಕೊಂಡಿರುವ ಏಕೈಕ ಭಾರತೀಯರಾಗಿದ್ದಾರೆ. ಕಳೆದ ವರ್ಷ ಏಷ್ಯಾಡ್ ನಲ್ಲಿ ಅವರನ್ನು ತಪ್ಪಾಗಿ ಅನರ್ಹಗೊಳಿಸಿದಾಗ ಎದೆಗುಂದದೆ ಹೋರಾಡಿ ಮರಳಿ ಸ್ಪರ್ಧಾಕಣಕ್ಕಿಳಿಯುವ ಮೂಲಕ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದರು. ಅವರು 13 ಸೆಕೆಂಡ್ ಒಳಗೆ ಈ ಓಟವನ್ನು ಪೂರೈಸಿರುವ ಏಕೈಕ ಭಾರತೀಯ ಮಹಿಳೆಯಾಗಿದ್ದಾರೆ. ಈ ವಿಭಾಗದಲ್ಲಿ ಭಾರತೀಯರ ಅಗ್ರ 15 ವೇಗದ ಓಟದ ದಾಖಲೆ ಅವರದೇ ಹೆಸರಿನಲ್ಲಿದೆ. ಜ್ಯೋತಿ ಅವರ ವೈಯಕ್ತಿಕ ಅತ್ಯುತ್ತಮ ಓಟದ ದಾಖಲೆ 12.78 ಸೆಕೆಂಡ್ ಗಳಾಗಿವೆ. ಹಾಲಿ ವರ್ಷದ ಆರಂಭದಲ್ಲಿ ಫಿನ್‌ಲ್ಯಾಂಡ್‌ನ ಮೊಟೊನೆಟ್ ಜಿಪಿಯಲ್ಲಿ ಅಂತಿಮ ಅಡಚಣೆಯ ನಡುವೆಯೂ ಅವರು ಈ ಸಾಧನೆ ಮಾಡಿದ್ದರು. ಭಾರತದ ನೆಲದಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿರುವ ಅವರು ಇತ್ತೀಚಿನ ಸೀನಿಯರ್ ಅಂತರ-ರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲೂ ಚಿನ್ನ ಗೆದ್ದುಕೊಂಡಿದ್ದರು.ಜ್ಯೋತಿ ಅವರದು ಸ್ಫೂರ್ತಿದಾಯಕ ಜರ್ನಿ:
ಜ್ಯೋತಿ ಯರ್ರಾಜಿ ಅವರ ಒಲಿಂಪಿಕ್ಸ್ ಪಯಣ ಕೇವಲ ದಾಖಲೆಗಳನ್ನು ಮುರಿಯುವುದಲ್ಲ. ಇದು ರಾಷ್ಟ್ರವನ್ನು ಪ್ರೇರೇಪಿಸುವ ಪಯಣವಾಗಿದೆ. ಆಕೆಯ ಸಾಧನೆಗಳು, ಸ್ಥಿತಿಸ್ಥಾಪಕತ್ವ ಮತ್ತು ನಿರ್ಣಯದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ. ರಿಲಯನ್ಸ್ ಫೌಂಡೇಶನ್‌ನ ಬೆಂಬಲದೊಂದಿಗೆ ಭಾರತೀಯ ಕ್ರೀಡಾಪಟುಗಳು ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸಬಹುದು ಎಂದು ಅವರು ತೋರಿಸಿದ್ದಾರೆ. ಪ್ಯಾರಿಸ್‌ನಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿರುವ ಜ್ಯೋತಿ, ಅವರು ಇತಿಹಾಸ ನಿರ್ಮಿಸುವುದನ್ನು ನೋಡಲು ಉತ್ಸುಕರಾಗಿರುವ ರಾಷ್ಟ್ರದ ಜನರ ಭರವಸೆಯ ಆಶಾಕಿರಣವಾಗಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಅವರ ಉಪಸ್ಥಿತಿಯು ಭವಿಷ್ಯದ ಪೀಳಿಗೆಯ ಭಾರತೀಯ ಮಹಿಳಾ ಹರ್ಡಲರ್‌ಗಳಿಗೆ ದಾರಿ ಮಾಡಿಕೊಡುವುದಲ್ಲದೆ, ಜಾಗತಿಕ ವೇದಿಕೆಯಲ್ಲಿ ಭಾರತೀಯ ಕ್ರೀಡಾಪಟುಗಳ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಜ್ಯೋತಿಯವರ ಸಾಧನೆಗಳು ಭಾರತದಲ್ಲಿ ಕ್ರೀಡೆಯ ಹೆಚ್ಚುತ್ತಿರುವ ಬೆಂಬಲ ಮತ್ತು ಅಭಿವೃದ್ಧಿಗೆ ಸಾಕ್ಷಿಯಾಗಿದೆ. ವಿಶೇಷವಾಗಿ ರಿಲಯನ್ಸ್ ಫೌಂಡೇಶನ್‌ನಂಥ ಉಪಕ್ರಮಗಳ ಮೂಲಕ ಇದು ಸಾಧ್ಯವಾಗಿದೆ. ಆಕೆಯ ಯಶಸ್ಸು ಹೆಚ್ಚು ಯುವ ಕ್ರೀಡಾಪಟುಗಳು ಟ್ರ್ಯಾಕ್ ಮತ್ತು ಫೀಲ್ಡ್ ನತ್ತ (ಅಥ್ಲೆಟಿಕ್ಸ್) ಬರಲು ಪ್ರೇರೇಪಿಸುತ್ತದೆ.