ಬೆಂಗಳೂರು: ವೀರಶೈವ ಲಿಂಗಾಯತ ಸಂಘಟನೆ ವೇದಿಕೆಯ ವತಿಯಿಂದ ಕೊಡಲ್ಪಡುವ “ವೀರಭದ್ರ” ರಾಷ್ಟ್ರೀಯ ಪ್ರಶಸ್ತಿಗೆ ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯರು ಹಾಗೂ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ವಿ.ಸೋಮಣ್ಣರವರು ಆಯ್ಕೆಯಾಗಿದ್ದಾರೆ.
ವೀರಶೈವ ಲಿಂಗಾಯತ ಸಂಘಟನ ವೇದಿಕೆಯ ಆಶ್ರಯದಲ್ಲಿ ರಾಷ್ಟೀಯ ಅದ್ಯಕ್ಷರಾದ ಪ್ರದೀಪ್ ಕಂಕಣವಾಡಿ ರವರ ನೇತೃತ್ವದಲ್ಲಿ ದಿ. 12-12-2024 ರ ಗುರುವಾರ ಸಂಜೆ 5-00 ಗಂಟೆಗೆ ದೆಹಲಿಯ ಪ್ರಗತಿ ಮೈದಾನದ ಭಾರತ್ ಮಂಟಪದಲ್ಲಿ
ವೀರಭದ್ರ ಜಯಂತಿ ಆಚರಿಸಲಾಗುತ್ತಿದೆ.
ಇದೇ ಸಂದರ್ಭದಲ್ಲಿ “ವೀರಭದ್ರ” ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ನಾಡಿನ ನೂರಕ್ಕೂ ಹೆಚ್ಚು ಮಠಾದೀಶರುಗಳು, ಕೇಂದ್ರ ಸಚಿವರು, ಲೋಕಸಭಾ ಸದಸ್ಯರುಗಳು ಭಾಗವಹಿಸಲಿದ್ದಾರೆ.
ವೀರಶೈವ ಲಿಂಗಾಯತ ಸಂಘಟನ ವೇದಿಕೆಯ ವತಿಯಿಂದ 6 ವರ್ಷಗಳ ಹಿಂದೆ ಇಡೀ ದೇಶದಾದ್ಯಂತ ವೀರಭದ್ರೇಶ್ವರ ಜಯಂತೋತ್ಸವವನ್ನು ಆಚರಿಸಲು ಕರೆ ಕೊಡಲಾಯಿತು. ರಾಜ್ಯದಾದ್ಯಂತ ಇರುವ ವೀರಭದ್ರನ ದೇವಾಲಯಗಳಲ್ಲಿ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಶ್ರಾವಣ ಮಾಸದ ಎರಡನೇ ಮಂಗಳವಾರ ವೀರಭದ್ರರ ಜನನವಾಯಿತು ಎಂದು ಇತಿಹಾಸ ಹೇಳುತ್ತದೆ.
ಅವತ್ತು ಇಡೀ ದೇಶದಾದ್ಯಂತ ಆಚರಣೆ ಮಾಡುತ್ತಾ ಬರಲಾಗುತ್ತಿದೆ.
ವೀರಶೈವ ಲಿಂಗಾಯತ ಸಂಘಟನ ವೇದಿಕೆಯ ಆಶ್ರಯದಲ್ಲಿ ವೀರಭದ್ರೇಶ್ವರನ ಹೆಸರಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಮೊಟ್ಟ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ.ನವರಿಗೆ ನೀಡಲಾಯಿತು. ರಂಭಾಪುರಿ ಶ್ರೀಗಳು ದಿವ್ಯಸಾನಿದ್ಯ ವಹಿಸಿದ್ದರು..
ಎರಡನೇಯವರಾಗಿ ಕೆ.ಎಲ್.ಇ ಸಂಸ್ಥೆಯ ಅದ್ಯಕ್ಷ ಪ್ರಭಾಕರ್ ಕೋರೆ ರವರಿಗೆ ಬೆಂಗಳೂರು ಅರಮನೆ ಮೈದಾನದಲ್ಲಿ ನೀಡಲಾಯಿತು. ಮೂರನೇಯವರಾಗಿ ಇಸ್ರೋ ಸಂಸ್ಥೆಯ ಅದ್ಯಕ್ಷ. ಎಸ್.ಸೋಮನಾಥ್ ರವರಿಗೆ ನೀಡಲಾಗಿತ್ತು. ಈ ವರ್ಷ ತುಮಕೂರು ಲೋಕಸಭಾ ಕ್ಷೇತ್ರದ ಸದಸ್ಯರು ಹಾಗೂ ಕೇಂದ್ರದ ರೈಲ್ವೆ ಮತ್ತು ಜಲಶಕ್ತಿ ಸಚಿವ ವಿ.ಸೋಮಣ್ಣ ನವರಿಗೆ ಪ್ರದಾನ ಮಾಡಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ನಾಡಿನದಾದ್ಯಂತ ಗುರು- ವಿರಕ್ತ ಪರಂಪರೆಯ ಮಠಾದೀಶರುಗಳು ಉಪಸ್ಥಿತರಿರುತ್ತಾರೆ.
ಕೇಂದ್ರ ಸಚಿವರುಗಳು ಲೋಕಸಭಾ ಸದಸ್ಯರುಗಳು ಆಗಮಿಸಲಿದ್ದಾರೆ.