ಬೆಂಗಳೂರು: ನಗರದಲ್ಲಿ ಅತಿ ವೇಗವಾಗಿ ಹರಡುತ್ತಿರುವ “ಡೆಂಗ್ಯೂ” ಜ್ವರದ ಬಗ್ಗೆ ಜನರಿಗೆ ಅರಿವು ಮೂಡಿಸಲು ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರ ಮಾರ್ಗದರ್ಶನದಂತೆ ಜಾಗೃತಿ ಅಭಿಯಾನ ನಡೆಸಲಾಯಿತು. ಸುಬ್ರಹ್ಮಣ್ಯ ನಗರದ “ಪಿ ಹೆಚ್ ಸಿ ಡಾಕ್ಟರ್ಸ್” ಹಾಗೂ ಸಿಬ್ಬಂದಿಗಳು ಮತ್ತು ವಾರ್ಡ್ ಕಾರ್ಯಕರ್ತರೊಂದಿಗೆ ಮನೆ ಮನೆಗೆ ಸಂಪರ್ಕ ಮಾಡಿ ಮನೆ ಮುಂದೆ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಜನರಿಗೆ ಅರಿವು / ಜಾಗೃತಿ ಮೂಡಿಸಲಾಯಿತು.ಈ ಸಂದರ್ಭದಲ್ಲಿ ಬಿಬಿಎಂಪಿಯ ಸುಬ್ರಹ್ಮಣ್ಯ ನಗರ ವಾರ್ಡ್ ನ ನಿಕಟ ಪೂರ್ವ ಸದಸ್ಯರಾದ ಹೆಚ್.ಮಂಜುನಾಥ್ ಹಾಗೂ ಸುಬ್ರಹ್ಮಣ್ಯನಗರ ವಾರ್ಡ್ ನ ಭಾರತೀಯ ಜನತಾ ಪಾರ್ಟಿಯ
ವಾರ್ಡ್ ನ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಬಿ.ಕೆ.ಸರಸ್ವತಿ, ಆಶಾ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.