December 23, 2024

ಉಡುಪಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದಿಂದ 125ನೇ ಸರಣಿ ಕಾರ್ಯಕ್ರಮ “‘ಮನೆಯೇ ಗ್ರಂಥಾಲಯ” ಡಿ.2 ರ ಸೋಮವಾರ ಬೆಳಗ್ಗೆ 11 ಗಂಟೆಗೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಉದ್ಘಾಟನೆಗೊಳ್ಳಲಿದೆ . ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿಯವರು ಗ್ರಂಥಾಲಯವನ್ನು ಉದ್ಘಾಟಿಸಲಿದ್ದಾರೆ.

ಡಾ.ಕೆ.ವಿದ್ಯಾ ಕುಮಾರಿ:

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿಯವರು ಕನ್ನಡ ಸ್ನಾತಕೋತ್ತರ ಪದವೀಧರರು. ಕನ್ನಡದ ಬಗ್ಗೆ ಬಹಳ ಅಭಿಮಾನವುಳ್ಳವರು. ಪುಸ್ತಕ ಪ್ರೀತಿ, ಸಾಹಿತ್ಯ ಜ್ಞಾನ ಉಳ್ಳವರು. ಸಾಹಿತಿಗಳ ಕುರಿತು ಅಪಾರ ಗೌರವವನ್ನು ಹೊಂದಿರುವವರು. ಅವರು ಈ ಹಿಂದೆ ತುಮಕೂರಿನಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದಾಗ ಅವರ ಕಚೇರಿಯ ಮುಂಭಾಗದಲ್ಲಿ ಒಂದು ಕೋಣೆಯನ್ನೇ ಗ್ರಂಥಾಲಯ ಮಾಡಿರುವುದು ಅವರ ಪುಸ್ತಕ ಪ್ರೀತಿಗೆ ಸಾಕ್ಷಿ.

ಕ.ಸಾ.ಪ ಉಡುಪಿ ತಾಲೂಕು ಘಟಕ ನಡೆಸುತ್ತಿರುವ “ಮನೆಯೇ ಗ್ರಂಥಾಲಯ” ಅಭಿಯಾನವನ್ನು ಮೆಚ್ಚಿ, ಈ ಕಾರ್ಯಕ್ರಮ ತಮ್ಮ ಕಚೇರಿಯಲ್ಲಿಯೂ ಆಗಬೇಕೆಂಬ ಅಭಿಲಾಷೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಅವರಲ್ಲಿ ತಿಳಿಸಿರುವುದು, ಕನ್ನಡ ಭಾಷೆಯ ಕುರಿತು ಅವರಿಗಿರುವ ಅಭಿಮಾನಕ್ಕೆ ನಿದರ್ಶನ.

ಜಿಲ್ಲಾಧಿಕಾರಿಗಳ ಅಪೇಕ್ಷೆಯಂತೆ 125ನೇ “ಮನೆಯೇ ಗ್ರಂಥಾಲಯ”ವು ಜಿಲ್ಲಾಧಿಕಾರಿ ಕಚೇರಿಯಲ್ಲಿ ಅನಾವರಣವಾಗುತ್ತಿರುವುದು ಬಹಳ ಸಂತಸದ ಸಂಗತಿ. ಇನ್ನು ಮುಂದೆ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ಬರುವ ಸಾರ್ವಜನಿಕರು, ಜಿಲ್ಲಾಧಿಕಾರಿಗಳ ಸಿಬ್ಬಂದಿಗಳು ತಮ್ಮ ಬಿಡುವಿನ ಸಮಯದಲ್ಲಿ ಅಲ್ಲಿಯೇ ಪಕ್ಕದಲ್ಲಿರುವ ಗ್ರಂಥಾಲಯದಿಂದ ಕನ್ನಡ ಪುಸ್ತಕಗಳನ್ನು ಆರಿಸಿ, ತೆರೆದು ಓದಬಹುದು.


Leave a Reply

Your email address will not be published. Required fields are marked *