ಬೆಂಗಳೂರು: ಮೈಸೂರು ಮುಖ್ಯ ರಸ್ತೆಯಲ್ಲಿರುವ ರಾಜರಾಜೇಶ್ವರಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಕ್ರೀಡಾ ದಂತ ವೈದ್ಯಕೀಯ ವಿಭಾಗದ ಮೊದಲ ನೋಡಲ್ ಸೆಂಟರ್ ಮತ್ತು ಕ್ಲಿನಿಕನ್ನು ದಕ್ಷಿಣ ವಿಭಾಗದ ಕ್ರೀಡಾ ಪ್ರಾಧಿಕಾರದ ಪ್ರಾದೇಶಿಕ ನಿರ್ದೇಶಕ ವಿಷ್ಣು ಸುಧಾಕರನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಭಾರತೀಯ ದಂತ ಚಿಕಿತ್ಸಾ ಸಂಸ್ಥೆ ಮತ್ತು ಭಾರತೀಯ ಕ್ರೀಡಾ ದಂತ ಚಿಕಿತ್ಸಾ ಅಕಾಡೆಮಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ನೋಡೆಲ್ ಸೆಂಟರ್, ಕ್ರೀಡಾಪಟುಗಳು ಅವರ ಗುರಿಗಳನ್ನು ಸಾಧಿಸಲು ದಂತ ಆರೋಗ್ಯದ ಮಹತ್ವವನ್ನು ಗುರುತಿಸಿ, ಒಲಂಪಿಕ್ ಮತ್ತು ಕಾಮನ್‌ವೆಲ್ತ್ ಗೇಮ್ ನಂತಹ ಅಂತರ್ ರಾಷ್ಟ್ರೀಯ ಸಂಸ್ಥೆಗಳು ಕ್ರೀಡಾಪಟುಗಳಿಗೆ ಈ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ರಾಜರಾಜೇಶ್ವರೀ ಸಮೂಹ ಸಂಸ್ಥೆಗಳ ಸಂಸ್ಥಾಪಕ ಕುಲಪತಿ ಡಾ.ಎ.ಸಿ.ಷಣ್ಮುಗಂ ಮಾತನಾಡಿ ಕ್ರೀಡಾ ದಂತ ವೈದ್ಯಕೀಯ ನೋಡೆಲ್ ದಕ್ಷಿಣ ಭಾರತದಲ್ಲಿ ಇದು ಮೊದಲನೆಯದಾಗಿದೆ. ಈ ಸೌಲಭ್ಯವನ್ನು ಕ್ರೀಡಾ ಪಟುಗಳಿಗೆ ನೀಡುತ್ತಿರುವ ಕೊಡುಗೆಯಾಗಿದೆ. ಎಲ್ಲಾ ಸೌಲಭ್ಯಗಳ ಪ್ರಯೋಜನವನ್ನು ಕ್ರೀಡಾಪಟುಗಳು ಸದುಪಯೋಗ ಪಡಿಸಿಕೊಳ್ಳಬೇಕು.
ರಾಜರಾಜೇಶ್ವರಿ ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಹಭಾಗಿತ್ವದಲ್ಲಿ ಪ್ರಾರಂಭವಾದ ಈ ವಿಭಾಗವು ಕ್ರೀಡಾ ಪ್ರಾಧಿಕಾರಕ್ಕೆ ಸಂಭಂಧಿಸಿದ ಕ್ರೀಡಾಪಟುಗಳಿಗೆ ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳ ಕ್ರೀಡಾ ವಿದ್ಯಾರ್ಥಿಗಳಿಗೆ ಸಲಹೆ ಮತ್ತು ಚಿಕಿತ್ಸೆ ನೀಡುವ ಉಪಕರಣಗಳ ಸೌಲಭ್ಯವನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾರತೀಯ ದಂತಚಿಕಿತ್ಸಾ ಸಂಸ್ಥೆಯ ಉಪಾಧ್ಯಕ್ಷ ಡಾ.ರಂಗನಾಥ, ಭಾರತೀಯ ಓಲಂಪಿಕ್ ಅಥ್ಲೇಟ್ ಡಾ.ಪ್ರಿಯಾಂಕಾ ಗೋಸ್ವಾಮಿ, ಭಾರತೀಯ ದಂತ ಚಿಕಿತ್ಸಾ ಅಕಾಡೆಮಿಯ ಶೈಕ್ಷಣಿಕ ನಿರ್ದೇಶಕ ಡಾ.ರೀನಾ ಕುಮಾರ್, ಕಾರ್ಯಕಾರಿಣಿ ನಿರ್ದೇಶಕ ಡಾ.ವಿಜಯಾನಂದ್, ದಂತವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಎಡ್ವಿನ್ ದೇವದಾಸ್, ಪ್ರಾಂಶುಪಾಲ ಡಾ.ಹೆಚ್.ಸಿ.ಗಿರೀಶ್, ಕ್ರೀಡಾ ದಂತ ಚಿಕಿತ್ಸಕ ಡಾ.ಸಿದ್ಧಾರ್ಥ ಭಾಗವಹಿಸಿದ್ದರು.