ಬೆಂಗಳೂರು: ರೋಟರಿ ಸಂಸ್ಥೆ ಹಾಗೂ ವಿವೇಕ ಜಾಗೃತಿ ಸಹಯೋಗದೊಂದಿಗೆ ನಾಳೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಕೆಂಗೇರಿ ಉಪನಗರದ ಗುರುರಾಜ ಕಲ್ಯಾಣ ಮಂಟಪದಲ್ಲಿ ಉಚಿತ ಕಣ್ಣಿನ ತಪಾಸಣೆ ನಡೆಯಲಿದೆ.
ವಿಧಾನಪರಿಷತ್ ಸದಸ್ಯರಾದ ಟಿ.ಎನ್.ಜವರಾಯಿ ಗೌಡ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವರು ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾದ ಕು.ಶೋಭಾ ಕರಂದ್ಲಾಜೆಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಉಚಿತ ಕಣ್ಣಿನ ತಪಾಸಣೆ ಮತ್ತು ಆಧುನಿಕ ಶಸ್ತ್ರ ಚಿಕಿತ್ಸೆ ಮೂಲಕ ಐಒಎಲ್ ಅಳವಡಿಕೆ ಶಿಬಿರದಲ್ಲಿ ಅರ್ಹರಿಗೆ ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಹೆಚ್.ವಾಸು ಪ್ರಸಾದ್, ಅಧ್ಯಕ್ಷರು, ರೋಟರಿ ಸಂಸ್ಥೆ, ಕೆಂಗೇರಿ ಉಪನಗರ.
ಮೊ-9242884666
ಶಶಿಕುಮಾರ್ -9916183333
ನಾಗರಾಜು-9448417709
ನಂದಕುಮಾರ್ -8105324525