December 23, 2024

ಸಂಜೆ ಪ್ರಭ ಉಡುಪಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ಇಂದು ಅಜ್ಜರಕಾಡು ಜಿಲ್ಲಾಸ್ಪತ್ರೆಯ‌ ಬ್ರೈನ್ ಹೆಲ್ತ್ ಕ್ಲಿನಿಕ್ ನಲ್ಲಿ ಮಾಹಿತಿ ಮತ್ತು ಮೆದುಳಿನ ಮಾದರಿ ಪ್ರದರ್ಶನ ಕಾರ್ಯಕ್ರಮದೊಂದಿಗೆ “ವಿಶ್ವ ಮೆದುಳು ದಿನ” ಆಚರಿಸಲಾಯಿತು.

ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಹೆಚ್.ಅಶೋಕ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ವೈದ್ಯಾದಿಕಾರಿ ಡಾ.ಐ.ಪಿ.ಗಡಾದ ರವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನಿವಾಸಿ ವೈದ್ಯಾಧಿಕಾರಿಗಳಾದ ಡಾ.ಕೆ.ವಾಸುದೇವ್ ರವರು ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮೆದುಳಿನ ಆರೋಗ್ಯ ಉಪಕ್ರಮದ ಮೂಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ವಿಧಾನ ಮತ್ತು ಇದರ ಸದುಪಯೋಗ ಪಡೆಯುವ ಬಗ್ಗೆ ಸೂಕ್ತ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೆಎಂಸಿ ಮಣಿಪಾಲದ ಪ್ರಾಧ್ಯಾಪಕರಾದ ಡಾ.ಕುಮಾರ್ ಭಟ್ ಮೆದುಳಿನ ಅಂಗರಚನಾಶಾಸ್ತ್ರ ಮತ್ತು ಮೆದುಳಿನ ಆರೋಗ್ಯ ವೃದ್ಧಿಪಡಿಸುವ ಜೀವನ ಶೈಲಿಯ ಬಗ್ಗೆ ಮೆದುಳಿನ ಮಾದರಿ ಉಪಯೋಗಿಸಿ ಮಾಹಿತಿ ನೀಡಿದರು.
ಜಿಲ್ಲಾ ಕುಷ್ಟ ರೋಗ ನಿರ್ಮೂಲನಾ ಅಧಿಕಾರಿಗಳಾದ ಡಾ.ಲತಾ‌ ನಾಯಕ್, ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಿಕಿನ್ ಶೆಟ್ಟಿ ಮತ್ತು ಸುಶ್ರೂಕಾ ಅಧಿಕ್ಷಕಿ ಲೀಲಾವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸೈಕೋಲಜಿಸ್ಟ್ ಅಬ್ದುಲ್ ಸಮದ್, ಫಿಸಿಯೋತೆರಪಿಸ್ಟ್‌ ನೇಹಾ ಪ್ರೀಮಲ್ ಡಿಕ್ರೂಸ್, ಬ್ರ್ರೈನ್ ಹೆಲ್ತ್ ಉಪಕ್ರಮದ ಜಿಲ್ಲಾ ಸಂಯೋಜಕಿ ಅನುಷಾ ಮುಂತಾದವರು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *