ಉಡುಪಿ: ಗುರು ಪೂರ್ಣಿಮೆಯ ದಿನದ ಅಂಗವಾಗಿ ಸುಮಾರು 35 ವರ್ಷಗಳ ಕಾಲ ಉಡುಪಿಯ ಮುಕುಂದ ಕೃಪಾ ಶಾಲೆಯ ಉಪಾದ್ಯಾಯಿನಿ, ಮುಖ್ಯೋಪಾಧ್ಯಾಯಿನಿಯಾಗಿ ಅದೇ ರೀತಿ 5 ವರ್ಷಗಳ ಕಾಲ ಗುಂಡಿಬೈಲು ಶಾಲೆಯಲ್ಲೂ ಉಪಾಧ್ಯಾಯಿನಿಯಾಗಿ ಎಳೆಯ ಮಕ್ಕಳಿಗೆ ಜ್ಞಾನ, ವಿಜ್ಞಾನ, ಸಂಸ್ಕೃತಿಯ ಬಗ್ಗೆ ತನ್ನ ವಿಚಾರಧಾರೆಗಳನ್ನು ಹಂಚಿ ಅವರನ್ನು ಸಂಸ್ಕಾರ ಶೀಲರನ್ನಾಗಿ ಬೆಳೆಸುವಲ್ಲಿ ಸತ್ಪ್ರಜೆಯನ್ನಾಗಿ ರೂಪಿಸುವಲ್ಲಿ ತನ್ನ ಜೀವನವನ್ನು ಮುಡುಪಾಗಿಟ್ಟ ಕಮಲಿನೀ ಯವರ ನಿವಾಸಕ್ಕೆ ತೆರಳಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ನ ಸದಸ್ಯರು ಅವರ ಕುಟುಂಬದ ಸಮ್ಮುಖದಲ್ಲಿ ಫಲಪುಷ್ಪ ಹಾರ ಶಾಲು ಸ್ಮರಣಿಕೆಯನ್ನು ನೀಡಿ ಗುರುವಂದನೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಯುವ ಬ್ರಾಹ್ಮಣ ಪರಿಷತ್ತಿನ ಅಧ್ಯಕ್ಷ ಚಂದ್ರಕಾಂತ್ ಕೆ. ಎನ್., ಪ್ರಧಾನ ಕಾರ್ಯದರ್ಶಿ ರಾಜೇಶ್ ಭಟ್ ಪಣಿಯಾಡಿ, ನಿಕಟಪೂರ್ವ ಅಧ್ಯಕ್ಷ ಚೈತನ್ಯ ಎಂ.ಜಿ., ಮಾಜಿ ಅಧ್ಯಕ್ಷ ವಿಷ್ಣು ಪಾಡಿಗಾರು, ಸದಸ್ಯ ಮುರಳಿ ಅಡಿಗ, ಮತ್ತು ಗುರುಗಳ ಮನೆಯವರು ಉಪಸ್ಥಿತರಿದ್ದರು.