December 24, 2024

ಬೆಂಗಳೂರು: ಸೆಪ್ಟಂಬರ್ 5 ರಿಂದ ರಾಜ್ಯದ ಹತ್ತೂ ಪಾಲಿಕೆಗಳಲ್ಲಿ ಸಂಪೂರ್ಣ ಕೆಲಸ ಸ್ಥಗಿತಗೊಳಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎ.ಅಮೃತ್ ರಾಜ್ ಹೇಳಿದರು.

ಇಂದು ಖಾಸಗಿ ಹೋಟೆಲಿನಲ್ಲಿ ನಡೆದ ಹತ್ತೂ ಪಾಲಿಕೆಗಳ ತುರ್ತು ಸಭೆಯ ನಂತರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಬೇಡಿಕೆಗಳ ಈಡೇರಿಕೆಗಾಗಿ ಸೆಪ್ಟಂಬರ್ 4ನೇ ತಾರೀಖಿನ ವರಗೆ ಸರ್ಕಾರಕ್ಕೆ ಗಡುವು ನೀಡಲಾಗಿದೆ.

ಬೇಡಿಕೆ ಈಡೇರಿಕೆ ಆಗಿಲ್ಲವೆಂದರೆ ಸೆಪ್ಟಂಬರ್ 5ನೇ ತಾರೀಖಿನಿಂದ ಹತ್ತೂ ಮಹಾನಗರ ಪಾಲಿಕೆಗಳಲ್ಲಿ ಕೆಲಸ ಸಂಪೂರ್ಣ ಸ್ಥಗಿತಗೊಳಿಸಿ, ಪ್ರತಿಭಟನೆ ಮಾಡಲಾಗುವುದು. ನಮ್ಮ ಹೋರಾಟಕ್ಕೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಸಚಿವಾಲಯ ನೌಕರರ ಸಂಘವು ಸಂಪೂರ್ಣ ಬೆಂಬಲ ನೀಡಿದೆ ಎಂದು ಹೇಳಿದರು.


Leave a Reply

Your email address will not be published. Required fields are marked *