ಸಂಜೆ ಪ್ರಭ ಬೆಂಗಳೂರು: ಫ್ಯಾನ್ ಇಂಡಿಯಾ ಕ್ರಿಯೇಷನ್ಸ್ ವಿಜಯಪುರ ರವರ ಪ್ರಥಮ ಕಾಣಿಕೆ ನಟ ವಿಜಯ ರಾಘವೇಂದ್ರ ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿರುವ “ರುದ್ರಾಭಿಷೇಕಂ” ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ವಿಜಯಪುರದ ಫಾರಂ ಹೌಸ್ ನಲ್ಲಿ ಸರಳವಾಗಿ ನೆರವೇರಿತು.
ಸಮಾರಂಭದ ನಂತರ ವಿಜಯ ರಾಘವೇಂದ್ರ ಮಾತನಾಡಿ ನಮ್ಮ ನಾಡಿನ ಸಾಂಸ್ಕೃತಿಕ ಹಿನ್ನೆಲೆಯ ಜೊತೆಗೆ ಒಂದು ಸಣ್ಣ ಇತಿಹಾಸ, ಅದರ ವೈಭವವನ್ನು ತೆಗೆದುಕೊಂಡು ಹೋಗುವ ಕಥೆ. ಕಮರ್ಷಿಯಲ್ ಎಲಿಮೆಂಟ್ ಒಳಗೊಂಡದ್ದರೂ ಸಾಕಷ್ಟು ಡಿವೈನಿಟಿ ಇರುವ ಚಿತ್ರ. ವೀರಗಾಸೆ ಜಲೆಯ ಹಿನ್ನೆಲೆಯಲ್ಲಿ ಒಂದೊಳ್ಳೆ ಕಾನ್ಸೆಪ್ಟ್ ಇಟ್ಟುಕೊಂಡು ನಿರ್ದೇಶಕರು ಚಿತ್ರ ನಿರ್ದೇಶಿಸುತ್ತಿದ್ದು, ನಾನು ಇದೇ ಮೊದಲ ಬಾರಿಗೆ ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿರುವೆ. ಅಷ್ಟೇ ಅಲ್ಲ ಚಿತ್ರದಲ್ಲಿ ಸಾಕಷ್ಟು ಗೆಟಪ್‍ಗಳಿವೆ ಎಂದರು.
ನಿರ್ದೇಶಕ ಕೆ.ವಸಂತ್ ಕುಮಾರ್ ಮಾತನಾಡಿ ನಾನು ಕಳೆದ ಎರಡೂವರೆ ದಶಕಗಳಿಂದ ಚಿತ್ರರಂಗದಲ್ಲಿದ್ದೇನೆ. ಹಲವಾರು ಚಿತ್ರಗಳಿಗೆ ಸಹನಿರ್ದೇಶನ, ಕಥೆ, ಚಿತ್ರಕಥೆ ಬರೆದಿದ್ದೇನೆ. ಇದೊಂದು ಟ್ರೆಡಿಷನಲ್ ಸಬ್ಜೆಕ್ಟ್. ನಮ್ಮ ನಾಡಿನ ಅದರಲ್ಲೂ ದಕ್ಷಿಣ ಭಾರತದ ಹೆಸರಾಂತ ಜನಪದ ಕಲೆಯನ್ನು ಒಳಗೊಂಡಿರುವ ಪ್ರಚಲಿತವಾಗಿರುವ ಕಥೆ ಇದು. ಒಂದೂವರೆ ವರ್ಷದಿಂದ ಸಾಕಷ್ಟು ರೀಸರ್ಚ್ ಮಾಡಿ ಈ ಕಥೆ ರೆಡಿ ಮಾಡಿಕೊಂಡಿರುವೆ. ಒಂದಿಷ್ಟು ಮಠಾಧೀಶರನ್ನು ಸಂಪರ್ಕಿಸಿದಾಗ ಅವರೆಲ್ಲ ಒಳ್ಳೆ ಪ್ರಯತ್ನ ಗೆದ್ದೇ ಗೆಲ್ತೀಯ ಎಂದು ಶುಭ ಹಾರೈಸಿದರು. 15 ದಿನ ಇದೇ ಫಾರಂ ಹೌಸ್‍ದಲ್ಲಿ ಶೂಟ್ ಮಾಡಿ ನಂತರ ಚಿಕ್ಕತದಮಂಗಲದಲ್ಲಿ ಚಿತ್ರೀಕರಣ ಮಾಡುತ್ತೇವೆ ಎಂದು ತಿಳಿಸಿದರು.
ಚಿತ್ರದಲ್ಲಿ ನಾಯಕಿಯಾಗಿ ಮೈಸೂರು ಮೂಲದ ರಂಗಭೂಮಿ ಪ್ರತಿಭೆ ಪ್ರೇರಣಾ ನಟಿಸುತ್ತಿದ್ದಾರೆ. ಬಲರಾಜ್ ಊರ ಗೌಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶಿಷ್ಟ ಪಾತ್ರದಲ್ಲಿ ಖ್ಯಾತ ಜನಪದ ದಿಗ್ಗಜ ಗುರುರಾಜ್ ಹೊಸಕೋಟೆ ಇವರೊಂದಿಗೆ ವೈಜನಾಥ ಬಿರಾದಾರ, ಶಂಕರ ನಾರಾಯಣ್, ಮೈಸೂರು ಬಸವರಾಜ್, ಬ್ಯಾಂಕ್ ಪ್ರಸಾದ, ಮನು, ಬುಲೆಟ್ ವಿನು, ವಿನಯ್, ಸನತ್, ಸಂದೀಪ್, ಮಹಾಲಿಂಗ್ ಹೂಗಾರ್, ಸೌಂದರ್ಯ, ನವನೀತ, ಮಮತಾ, ಮಂಜುಳಾ, ಧನಲಕ್ಷ್ಮೀ, ಸ್ವಾತಿ, ಪ್ರಿಯಾಂಕ್ ಮೊದಲಾದವರಿದ್ದಾರೆ.
ತಾಂತ್ರಿಕವರ್ಗದಲ್ಲಿ ಛಾಯಾಗ್ರಹಣ ಮುತ್ತುರಾಜ್, ವಿ.ಮನೋಹರ್ ಸಂಗೀತ ಚಿತ್ರಕ್ಕಿದ್ದು ನಾಲ್ಕು ಗೀತೆಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಸುರೇಶ್ ಗುಟ್ಟಹಳ್ಳಿ ನೃತ್ಯ ಸಂಯೋಜನೆ, ಚಂದ್ರುಬಂಡೆ ಸಾಹಸ, ಬಾಬುಖಾನ್ ಕಲಾ ನಿರ್ದೇಶನ, ಮೇಕಪ್ ರಾಜ್, ವಸ್ತ್ರಾಲಂಕಾರ ಪಶುಪತಿ, ಸಂಕಲನ ಮುತ್ತುರಾಜ್.ಟಿ, ಪಿ.ಆರ್.ಓ ನಾಗೇಂದ್ರ, ಡಾ.ಪ್ರಭು. ಗಂಜಿಹಾಳ, ಡಾ.ವೀರೇಶ್ ಹಂಡಿಗಿ, ಪ್ರಚಾರಕಲೆ ದೇವು, ಸಹ ನಿರ್ದೇಶನ ಕಾಳಿದಾಸ ಅವರದಿದ್ದು, ಸುಮಾರು 25 ವರ್ಷಗಳ ಸಿನಿ ಪ್ರಯಾಣದಲ್ಲಿ ಹಲವಾರು ನಿರ್ದೇಶಕರುಗಳ ಜೊತೆ ಕಾರ್ಯನಿರ್ವಹಿಸಿದ ಕೆ.ವಸಂತ್ ಕುಮಾರ್ ಅವರು ಮೊದಲಸಲ ಚಿತ್ರ ನಿರ್ದೇಶನಕ್ಕಿಳಿದು ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.
ವಕೀಲರಾದ ಎನ್ ಜಯರಾಮ್, ಕೆ.ವೆಂಕಟೇಶ್, ಕೆ.ಎನ್.ಮಂಜುನಾಥ, ಬಿ.ಚಿದಾನಂದಮೂರ್ತಿ, ಬಿ.ಎ.ರಮೇಶ್, ರವಿಕುಮಾರ್, ಎಂ.ಎಸ್.ಚಿನ್ಮಯಿ, ಶ್ರೀಮತಿ ಕುಸುಮಾ ವಸಂತಕುಮಾರ್ ನಿರ್ಮಾಣ ಸಹಕಾರ ಅಶ್ವಥ್, ರಾಮಚಂದ್ರಪ್ಪ, ಮುನಿಕೃಷ್ಣಪ್ಪ, ಅನೀಸ್ ಉರ್ ರೆಹಮಾನ್, ಆನಂದ್, ಚಂದ್ರಶೇಖರ ಹಡಪದ, ನಿರ್ಮಾಣ ನಿರ್ವಹಣೆ ಡಾ.ಎಂ.ಶಿವಕುಮಾರ್ ಅವರದಿದೆ.
-ಡಾಪ್ರಭು ಗಂಜಿಹಾಳ