ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯ ಪರಿಷತ್ ಗೆ ಬೆಂಗಳೂರು ದಕ್ಷಿಣ ಮತಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಸೌಭಾಗ್ಯ.ಎ.ಎಂ ಅವರು ಜಯ ಸಾಧಿಸಿ ಆಯ್ಕೆಯಾಗಿದ್ದಾರೆ. ಬೆಂಗಳೂರು ದಕ್ಷಿಣ ವಲಯದ 1.2.3 ರ ಏಕೈಕ ಮಹಿಳಾ ಅಭ್ಯರ್ಥಿಯಾಗಿ ಸೌಭಾಗ್ಯ.ಎ.ಎಂ ಸ್ಪರ್ಧಿಸಿದ್ದರು.
ಮಹಿಳಾ ಅಭ್ಯರ್ಥಿಯಾಗಿ ಶಿಕ್ಷಕರ ಪರ ಹೋರಾಟಕ್ಕಾಗಿ ಸ್ಪರ್ಧಿಸಿದ ಇವರು 612 ಮತಗಳಿಂದ ಗೆದ್ದಿದ್ದಾರೆ.
ಈ ಸಂದರ್ಭದಲ್ಲಿ ನಾಗೇಶ್ ಯಲ್ಲಪ್ಪಾ, ಸರಳ, ಮಂಜುನಾಥ್, ಕೃಷ್ಣಮ್ಮ, ಆನಂದ್.ಎ.ಎಂ, ಉಲ್ಲಾಸ್ ಮುಂತಾದವರು ಸನ್ಮಾನಿಸಿ ಶುಭ ಕೋರಿದರು.