ಕನ್ನಡದ ಕಿರುತೆರೆ ಪ್ರೇಕ್ಷಕರಿಗೆ ಬಗೆಬಗೆಯ ಮನರಂಜನೆ ನೀಡುತ್ತಿರುವ “ಸ್ಟಾರ್ ಸುವರ್ಣ” ವಾಹಿನಿ ಇದೀಗ ಮಾಂಸಾಹಾರಿಗಳಿಗಾಗಿ ಹೊಸ ಕಾರ್ಯಕ್ರಮವನ್ನು ಆರಂಭಿಸಲು ಸಜ್ಜಾಗಿದೆ. ಈಗಾಗಲೇ “ಬೊಂಬಾಟ್ ಭೋಜನ” ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿ ಮನೆ ಮಾತಾಗಿದ್ದು, ಇನ್ಮುಂದೆ ವಾರಾಂತ್ಯದಲ್ಲಿ ನಾನ್ ವೆಜ್ ಪ್ರಿಯರಿಗಾಗಿ “ಬೊಂಬಾಟ್ ಬಾಡೂಟ” ಎಂಬ ಹೊಸ ಕಾರ್ಯಕ್ರಮ ಆರಂಭವಾಗಲಿದೆ.
ಕಿರುತೆರೆಯಲ್ಲಿ ಬಾಡೂಟದ ರಂಗೇಗೌಡ್ರು ಎಂದೇ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದ ಶೆಫ್ ಆದರ್ಶ್ ತಟಪತಿ, ಇದೀಗ ವರ್ಷಗಳ ಬಳಿಕ ಸ್ಟಾರ್ ಸುವರ್ಣ ವಾಹಿನಿಯ ಮೂಲಕ ಮತ್ತೆ ರಂಗೇಗೌಡರಾಗಿ “ಬೊಂಬಾಟ್ ಬಾಡೂಟ”ದ ಸಾರಥ್ಯವನ್ನು ನಿರ್ವಹಿಸಲಿದ್ದಾರೆ.
ಬೊಂಬಾಟ್ ಬಾಡೂಟದಲ್ಲಿ ಏನೆಲ್ಲಾ ಇರುತ್ತೆ ಎಂದು ಹೇಳೋದಾದ್ರೆ
1.ಖಾರ ಮಸಾಲ: ರಂಗೇಗೌಡರು ರುಚಿ-ರುಚಿಯಾದ ಮಾಂಸಾಹಾರಿ ಖಾದ್ಯಗಳನ್ನು ತಿಳಿಸುತ್ತಾರೆ.
2.ಮಿರ್ಚಿ ಮಸಾಲ: ಸೋಶಿಯಲ್ ಮೀಡಿಯಾದಲ್ಲಿ “ಉಂಡಾಡಿ ಗುಂಡ”ಎಂದೇ ಖ್ಯಾತಿ ಪಡೆದಿರುವ ವೆಂಕಟೇಶ್, ಕರ್ನಾಟಕದಾದ್ಯಂತ ಚಲಿಸಿ, ಜನಪ್ರಿಯತೆಗಳಿಸಿರುವ ವರ್ಷಗಳ ಇತಿಹಾಸವಿರುವ ಹೋಟೆಲ್ ಗಳಿಗೆ ಧಾವಿಸಿ ಅಲ್ಲಿನ ಜನಪ್ರಿಯ ನಾನ್ ವೆಜ್ ತಿನಿಸುಗಳನ್ನು ಸವಿದು ಜನರಿಗೆ ತಿಳಿಸುವುದು.
3.ನಾಟಿ ಮಸಾಲ: ಜನಸಾಮಾನ್ಯರು / ಸೆಲೆಬ್ರಿಟಿಸ್ ಗಳು ಬಂದು ವಿವಿಧ ರೀತಿಯ ಕೈರುಚಿಯನ್ನು ತಿಳಿಸಿಕೊಡುವುದು.
ಹೀಗೆ ಈ ಎಲ್ಲಾ ವಿಭಾಗಗಳನ್ನು ಹೊಂದಿದೆ. ಸೋಮವಾರದಿಂದ-ಶುಕ್ರವಾರ ಸಸ್ಯಾಹಾರಿಗಳಿಗಾಗಿ “ಬೊಂಬಾಟ್ ಭೋಜನ” ಪ್ರಸಾರವಾದರೆ, ಪ್ರತೀ ಶನಿವಾರ ಮಾಂಸಾಹಾರಿಗಳಿಗಾಗಿ “ಬೊಂಬಾಟ್ ಬಾಡೂಟ” ಪ್ರಸಾರವಾಗಲಿದೆ.
ಮನೆಮಂದಿಯೆಲ್ಲಾ ಒಂದಾಗಿ ನೋಡಿ, ರುಚಿಕರ ತಿನಿಸುಗಳನ್ನು ಮನೆಯಲ್ಲಿ ಟ್ರೈ ಮಾಡಿ, ಎಂಜಾಯ್ ಮಾಡಿ.
ಶುರುವಾಗ್ತಿದೆ ಘಮ್ ಅನ್ನುವ ಬಾಡೂಟದ ಕರಾಮತ್ತು, ನಾಲಿಗೆಗೆ ಸಿಗಲಿದೆ ಥರಥರದ ಗಮ್ಮತ್ತು “ಬೊಂಬಾಟ್ ಬಾಡೂಟ” ಇದೇ ಶನಿವಾರದಿಂದ ಪ್ರತೀ ಶನಿವಾರ ಮಧ್ಯಾಹ್ನ 12 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಿಮ್ಮ ರಂಗೇಗೌಡರ ಜೊತೆ ತಪ್ಪದೇ ವೀಕ್ಷಿಸಿ.